ದುಬೈ(ಯುಎಇ):ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ನೇರವಾಗಿ ಸೂಪರ್ ಫೋರ್ ಪ್ರವೇಶಿಸಿದೆ. ಇಂದು ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ.
ಏಷ್ಯಾ ಕಪ್: 40 ರನ್ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್ ಫೋರ್ಗೆ ಲಗ್ಗೆ - team india enters super four
ಹಾಂಗ್ ಕಾಂಗ್ ತಂಡ 5 ವಿಕೆಟ್ಗಳ ಕಳೆದುಕೊಂಡು 152 ರನ್ಗಳನ್ನು ಮಾತ್ರ ಕಲೆ ಹಾಕಿ, 40 ರನ್ಗಳಿಂದ ಸೋಲು ಕಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹಾಂಗ್ ಕಾಂಗ್ ತಂಡಕ್ಕೆ 193 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ, ಭಾರತದ ಬೌಲಿಂಗ್ ದಾಳಿಯನ್ನು ಎದುರಾಳಿ ಆಟಗಾರರಿಗೆ ಎದುರಿಸಲು ಸಾಧ್ಯವಾಗಿಲ್ಲ. ಬಾಬರ್ ಹಾಯತ್ (41), ಕಿಂಚಿತ್ ದೇವಾಂಗ್ ಶಾ (30) ಹಾಗೂ ಜೀಶನ್ ಅಲಿ (ಅಜೇಯ 26) ಮತ್ತು ಸ್ಕಾಟ್ ಮೆಕೆಚ್ನಿ (ಅಜೇಯ 16) ಕೊಂಚ ಉತ್ತಮವಾಗಿ ಬ್ಯಾಟ್ ಬೀಸಿದರೂ ತಂಡವನ್ನು ಗೆಲುವಿಗೆ ದಡ ಸೇರಿಸಲು ಆಗಲಿಲ್ಲ. ಕೊನೆಗೆ 5 ವಿಕೆಟ್ಗಳ ಕಳೆದುಕೊಂಡು 152 ರನ್ಗಳನ್ನು ಮಾತ್ರ ಕಲೆ ಹಾಕಿ, 40 ರನ್ಗಳಿಂದ ಸೋಲು ಕಂಡಿತು.
ಇದನ್ನೂ ಓದಿ:ಏಷ್ಯಾ ಕಪ್ 2022: ವಿರಾಟ್, ಸೂರ್ಯಕುಮಾರ್ ಮಿಂಚು; ಹಾಂಗ್ ಕಾಂಗ್ಗೆ 193 ರನ್ಗಳ ಟಾರ್ಗೆಟ್