ದುಬೈ(ಯುಎಇ): ಏಷ್ಯಾಕಪ್ ಟಿ20 ಟೂರ್ನಾಮೆಂಟ್ನ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಪಾಕ್ ಮೇಲೆ ಸವಾರಿ ಮಾಡಿರುವ ಶ್ರೀಲಂಕಾ 5 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುಂಚಿತವಾಗಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಆಜಂ ಬಳಗ 19.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 121ರನ್ಗಳಿಸಲು ಮಾತ್ರ ಶಕ್ತವಾಯಿತು. ಲಂಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ವನಿಂದು ಹಸರಂಗ. ಮಹೀಶ್ ತೀಕ್ಷಣ ಹಾಗೂ ಪ್ರಮೋದ್ ಮದುಶನ್ ಎದುರಾಳಿ ತಂಡದ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಾಕಿಸ್ತಾನದ ಪರ ಕ್ಯಾಪ್ಟನ್ ಬಾಬರ್(30) ಹಾಗೂ ನವಾಜ್(26) ವೈಯಕ್ತಿಕ ಗರಿಷ್ಠ ಸ್ಕೋರ್ರ ಆದರು.
ಉಳಿದಂತೆ ಭರವಸೆಯ ರಿಜ್ವಾನ್(14), ಫಖಾರ್ ಜಮಾನ್(13), ಅಹ್ಮದ್(13),ಕೌಶಲ್ದಿ(4), ಆಸೀಫ್(0), ಹಸನ್(0), ರೌಫ್(1)ರನ್ಗಳಿಸಿದರು. ಶ್ರೀಲಂಕಾ ಪರ ಮಿಂಚಿದ ಆಲ್ರೌಂಡರ್ ವನಿಂದು ಹಸರಂಗ ಪ್ರಮುಖ 3 ವಿಕೆಟ್ ಪಡೆದುಕೊಂಡರೆ, ಪ್ರಮೋದ್, ತೀಕ್ಷಣ್ ತಲಾ 2 ವಿಕೆಟ್ ಹಾಗೂ ಕರುಣರತ್ನೆ 1 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಶ್ರೀಲಂಕಾ: ಭಾರತದ ಏಷ್ಯಾ ಕಪ್ ಫೈನಲ್ ಹಾದಿ ಕಠಿಣ
ಸುಲಭ 122ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಕೇವಲ 29ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆದರೆ, ಈ ವೇಳೆ ಒಂದಾದ ನಿಶಾಂಕ್ ಹಾಗೂ ಭಾನುಕಾ ಮುರಿಯದ ಜೊತೆಯಾಟವಾಡಿ ತಂಡವನ್ನ ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು. ನಿಶಾಂಕ್ ಅಜೇಯ 55ರನ್ಗಳಿಸಿದರೆ, ಭಾನುಕಾ 24 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಬಂದ ಕ್ಯಾಪ್ಟನ್ ಶನಕ್ 21 ಹಾಗೂ ಹಸರಂಗ 10ರನ್ಗಳಿಸಿ ತಂಡವನ್ನ ಗೆಲುವಿನ ಗೆರೆ ದಾಟಿಸಿದರು. ತಂಡ ಕೊನೆಯದಾಗಿ 17 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 124ರನ್ಗಳಿಸಿ, ಗೆಲುವು ದಾಖಲಿಸಿದೆ. ಪಾಕ್ ಪರ ಮೊಹಮ್ಮದ್, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರೆ,ಉಸ್ಮಾನ್ 1 ವಿಕೆಟ್ ಕಿತ್ತರು.
ನಾಳೆ ಫೈನಲ್:ಏಷ್ಯಾಕಪ್ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಈಗಾಗಲೇ ಫೈನಲ್ಗೆ ಲಗ್ಗೆ ಹಾಕಿದ್ದು, ನಾಳೆ ಪ್ರಶಸ್ತಿಗೋಸ್ಕರ ಹೋರಾಟ ನಡೆಸಲಿವೆ. ನಿನ್ನೆ ರಾತ್ರಿ ನಡೆದ ಪಂದ್ಯ ಉಭಯ ತಂಡಗಳಿಗೆ ರಿಹರ್ಸಲ್ ಆಗಿದ್ದು, ಇದರಲ್ಲಿ ಗೆದ್ದ ಸಿಂಹಳೀಯರ ತಂಡದ ಆತ್ಮವಿಶ್ವಾಸ ಮತ್ತಷ್ಟು ವೃದ್ಧಿಯಾಗಿದೆ. ವಿಶೇಷವೆಂದರೆ ಏಷ್ಯಾಕಪ್ನ ಸೂಪರ್ ಫೋರ್ ಹಂತದ ಎಲ್ಲ ಪಂದ್ಯಗಳಲ್ಲೂ ಶ್ರೀಲಂಕಾ ಗೆಲುವು ದಾಖಲು ಮಾಡಿದೆ. ಈ ಟೂರ್ನಿಯಿಂದ ಈಗಾಗಲೇ ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಗ್ಕಾಂಗ್ ಹೊರಬಿದ್ದಿವೆ.