ಕರ್ನಾಟಕ

karnataka

ETV Bharat / sports

ಏಷ್ಯಾಕಪ್​​​ನಲ್ಲಿ ಹಾಂಗ್​​​​ಕಾಂಗ್​ ವಿರುದ್ಧ ಗೆದ್ದ ಪಾಕ್​​: ನಾಳೆ ಮತ್ತೊಮ್ಮೆ ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯ - ಏಷ್ಯಾಕಪ್​ನಿಂದ ಜಡೇಜಾ ಔಟ್

ಏಷ್ಯಾಕಪ್​​ನಲ್ಲಿ ನಾಳೆ ಮತ್ತೊಂದು ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಸೂಪರ್​ 4 ಹಂತದಲ್ಲಿ ಭಾರತ-ಪಾಕ್​ ಮುಖಾಮುಖಿಯಾಗಲಿವೆ.

Asia Cup 2022
Asia Cup 2022

By

Published : Sep 3, 2022, 6:40 AM IST

ಶಾರ್ಜಾ(ಯುಎಇ):ಕ್ರಿಕೆಟ್​ ಶಿಶು ಹಾಂಗ್​ಕಾಂಗ್​ ವಿರುದ್ಧ ಭರ್ಜರಿ 155ರನ್​​ಗಳ ಗೆಲುವು ದಾಖಲು ಮಾಡಿರುವ ಪಾಕಿಸ್ತಾನ ಏಷ್ಯಾಕಪ್​​ನಲ್ಲಿ ಸೂಪರ್​ 4 ಹಂತಕ್ಕೆ ಲಗ್ಗೆ ಹಾಕಿದೆ. ಹೀಗಾಗಿ, ನಾಳೆ ಭಾರತ ತಂಡದ ಸವಾಲನ್ನು ಮತ್ತೊಮ್ಮೆ ಎದುರಿಸಲಿದೆ. ಸೂಪರ್​ 4 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್​​​ ತಂಡಗಳು ಕಣಕ್ಕಿಳಿಯಲಿವೆ.

ಶುಕ್ರವಾರ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್​​​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು 193ರನ್​​ಗಳಿಸಿತು. ಈ ಗುರಿ ಬೆನ್ನತ್ತಿದ್ದ ಹಾಂಗ್​ಕಾಂಗ್​​ ತಂಡ 11 ಓವರ್​​​​ಗಳಲ್ಲಿ ಕೇವಲ 38ರನ್​​​ಗಳಿಸಿ ಎಲ್ಲ ವಿಕೆಟ್​ ಕಳೆದುಕೊಂಡಿತ್ತು. ಹೀಗಾಗಿ, 155ರನ್​​​ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ.

ಏಷ್ಯಾಕಪ್​​ನಲ್ಲಿ ಕಳೆದ ಭಾನುವಾರ ಪಾಕಿಸ್ತಾನ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅಬ್ಬರದಾಟಕ್ಕೆ ಪಾಕ್​​ 5ವಿಕೆಟ್​​​ಗಳ ಸೋಲು ಕಂಡಿತ್ತು. ಇದೀಗ, ನಾಳೆ ಮತ್ತೊಂದು ಸೂಪರ್ ಸಂಡೇ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಅದಕ್ಕಾಗಿ ದುಬೈನಲ್ಲಿ ವೇದಿಕೆ ಸಿದ್ಧವಾಗಿದೆ. ಭಾರತ-ಪಾಕಿಸ್ತಾನ 2012-2013ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುತ್ತಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​​ ನಿಯೋಜನೆಯ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಇದನ್ನೂ ಓದಿ:Asia Cup 2022: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್​ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

ಏಷ್ಯಾಕಪ್ 2022 ಸೂಪರ್ 4 ವೇಳಾಪಟ್ಟಿ

  • ಸೆಪ್ಟೆಂಬರ್ 3, ಶಾರ್ಜಾದಲ್ಲಿ ಶ್ರೀಲಂಕಾ vs ಅಫ್ಘಾನಿಸ್ತಾನ
  • ಸೆಪ್ಟೆಂಬರ್ 4, ದುಬೈನಲ್ಲಿ ಭಾರತ vs ಪಾಕಿಸ್ತಾನ
  • ಸೆಪ್ಟೆಂಬರ್ 6,ದುಬೈನಲ್ಲಿ ಭಾರತ vs ಶ್ರೀಲಂಕಾ
  • ಸೆಪ್ಟೆಂಬರ್ 7, ದುಬೈನಲ್ಲಿ ಪಾಕಿಸ್ತಾನ vs ಅಫ್ಘಾನಿಸ್ತಾನ
  • ಸೆಪ್ಟೆಂಬರ್ 8, ದುಬೈನಲ್ಲಿ ಭಾರತ vs ಅಫ್ಘಾನಿಸ್ತಾನ
  • ಸೆಪ್ಟೆಂಬರ್ 9, ದುಬೈನಲ್ಲಿ ಶ್ರೀಲಂಕಾ vs ಪಾಕಿಸ್ತಾನ
  • ಸೆಪ್ಟೆಂಬರ್ 11, ದುಬೈನಲ್ಲಿ ಫೈನಲ್ ಪಂದ್ಯ

ಏಷ್ಯಾಕಪ್​ನಿಂದ ಜಡೇಜಾ ಔಟ್​​; ಅಕ್ಷರ್ ಇನ್​​:ಮೊಣಕಾಲು ಗಾಯಕ್ಕೊಳಗಾಗಿರುವ ಟೀಂ ಇಂಡಿಯಾ ಆಲ್​ರೌಂಡರ್​ ರವೀಂದ್ರ ಜಡೇಜಾ ಏಷ್ಯಾಕಪ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಅವರ ಸ್ಥಾನಕ್ಕೆ ಆಲ್​ರೌಂಡರ್​ ಅಕ್ಷರ್​ ಪಟೇಲ್​​ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ಆಗಸ್ಟ್​​ 28ರಂದು ಪಾಕ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ 35ರನ್​​​ ಸಿಡಿಸಿದ್ದರು.

ABOUT THE AUTHOR

...view details