ನವದೆಹಲಿ :ವಿಶ್ವದಲ್ಲಿ ಪ್ರಸ್ತುತ ಸಕ್ರಿಯರಾಗಿರುವ ಸ್ಪಿನ್ ಬೌಲರ್ಗಳಲ್ಲಿ ಶ್ರೇಷ್ಠರಾಗಿರುವ ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮಂತೆಯೇ ಕ್ರಿಕೆಟ್‌ನಿಂದ ನಿಷೇಧವಾಗಬೇಕಿತ್ತು. ಆದರೆ, ಬಿಸಿಸಿಐನ ಸಂಪತ್ತು ಅವರನ್ನು ಉಳಿಸಿತು ಎಂದು ಪಾಕಿಸ್ತಾನದ ಸ್ಪಿನ್ನರ್ ಸಯೀದ್ ಅಜ್ಮಲ್ ಆರೋಪ ಮಾಡಿದ್ದಾರೆ.
ಅನುಮಾನಾಸ್ಪದ ಬೌಲಿಂಗ್ ಆ್ಯಕ್ಷನ್ ಕಾರಣ ಅಜ್ಮಲ್ರನ್ನು ಐಸಿಸಿ ಹಲವಾರು ಬಾರಿ ನಿಷೇಧಿಸಿತ್ತು. ಆದರೆ, ಆ ಸಂದರ್ಭದಲ್ಲಿ ಅಶ್ವಿನ್ರನ್ನು ಕೆಲವು ಸಮಯ ಕ್ರಿಕೆಟ್‌ನಿಂದ ದೂರವಿರಿಸಿ, ಬೌಲಿಂಗ್ ಆ್ಯಕ್ಷನ್ ಸರಿ ಮಾಡಿಕೊಳ್ಳಲು ಅವಕಾಶ ನೀಡಿ ಐಸಿಸಿನಿಂದ ನಿಷೇಧಗೊಳ್ಳುವುದನ್ನು ತಪ್ಪಿಸಿದ್ದರು ಎಂದು ಅಜ್ಮಲ್ ಹೇಳಿದ್ದಾರೆ.
"ನೀವು ಯಾರನ್ನೂ ಕೇಳದೆ ಈ ನಿಯಮಾವಳಿಗಳನ್ನು ಬದಲಾವಣೆ ಮಾಡಿದ್ದೀರಾ.. ನಾನು ಎಂಟು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೆ. ಆಗ ಎಲ್ಲಾ ನಿಯಮಗಳು ನನಗೆ ಮಾತ್ರ ಇದ್ದವಷ್ಟೇ.. ಅದೇ ಸಂದರ್ಭದಲ್ಲಿ ಅಶ್ವಿನ್ ಕ್ರಿಕೆಟ್‌ನಿಂದ 6 ತಿಂಗಳುಗಳ ಕಾಲ ದೂರವಿದ್ದರು. ಅದು ಯಾವುದಕ್ಕೆ? ನೀವು ಆತನ ಬೌಲಿಂಗ್ ಸುಧಾರಣೆಗಾಗಿ ಕೆಲಸ ಮಾಡಿ, ನಿಷೇಧದಿಂದ ಪಾರು ಮಾಡಿಸಿದ್ರಿ.