ಮುಂಬೈ:ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಸಂಪೂರ್ಣ ಭಾರತ ತಂಡದ ಹಿಡಿತದಲ್ಲಿದೆ. ಕೊಹ್ಲಿ ಪಡೆದ ನೀಡಿದ 540 ರನ್ಗಳನ್ನು ಬೆನ್ನಟ್ಟಿರುವ ನ್ಯೂಜಿಲ್ಯಾಂಡ್ ತಂಡ 3ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 140 ರನ್ಗಳಿಸಿದೆ. ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 5 ವಿಕೆಟ್ ಅಗತ್ಯವಿದ್ದರೆ, ಕಿವೀಸ್ ಗೆಲ್ಲಲು 400 ರನ್ಗಳ ಅವಶ್ಯಕತೆಯಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಗೆ ಆಲೌಟ್ ಆದರೆ, ಕಿವೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್(8ಕ್ಕೆ4) ಮತ್ತು ಸಿರಾಜ್(19ಕ್ಕೆ3) ದಾಳಿಗೆ ಸಿಲುಕಿ ಕೇವಲ 62 ರನ್ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನ್ನಿಂಗ್ಸ್ನ ಸಿಕ್ಕ 263 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 7 ವಿಕೆಟ್ ಕಳೆದುಕೊಂಡು 276 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು ಪ್ರವಾಸಿ ತಂಡಕ್ಕೆ 540 ರನ್ಗಳ ಬೃಹತ್ ಗುರಿ ನೀಡಿತು.
ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಬ್ಮನ್ ಗಿಲ್ 47, ಕೊಹ್ಲಿ 36 ಮತ್ತು ಅಕ್ಷರ್ ಪಟೇಲ್ 41 ರನ್ಗಳಿಸಿದ್ದರು. ಕಿವೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದಿದ್ದ ಅಜಾಜ್ ಮತ್ತೆ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 3 ವಿಕೆಟ್ ಪಡೆದರು.
ಆರಂಭಿಕ ಆಘಾತ: