ಕರ್ನಾಟಕ

karnataka

ETV Bharat / sports

ಕುಂಬ್ಳೆ, ಭಜ್ಜಿ, ಕಪಿಲ್​ ದೇವ್ ಅಂತಹ ದಿಗ್ಗಜರನ್ನ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಅಶ್ವಿನ್​

ಕಿವೀಸ್​ ಓಪನರ್​ ವಿಲ್​ ಯಂಗ್(20) ವಿಕೆಟ್ ಪಡೆಯುವ ಮೂಲಕ ಅಶ್ವಿನ್​ 2021ರಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು. ಇದಕ್ಕೂ ಮುನ್ನ 2015, 2016, 2017ರಲ್ಲಿ 50+ ವಿಕೆಟ್ ಪಡೆದಿದ್ದರು. ಈ ವರ್ಷ ಸೇರಿದಂತೆ ಅಶ್ವಿನ್​ ವೃತ್ತಿ ಜೀವನದಲ್ಲಿ 4 ವರ್ಷ 50+ ವಿಕೆಟ್​ ಪಡೆದ ಏಕೈಕ ಬೌಲರ್​ ಎನಿಸಿಕೊಡಿದ್ದಾರೆ.

Ashwin surpass Kumble and Harbhajan singh's record
ರವಿಚಂದ್ರನ್ ಅಶ್ವಿನ್ ದಾಖಲೆ

By

Published : Dec 5, 2021, 3:58 PM IST

ಮುಂಬೈ: ಭಾರತದ ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ನಲ್ಲಿ 2 ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್​ ಅಶ್ವಿನ್​ ಕ್ಯಾಲೆಂಡರ್​ ವರ್ಷದಲ್ಲಿ 50ಕ್ಕೂ ಹೆಚ್ಚು ವಿಕೆಟ್​​ಗಳನ್ನು ಹೆಚ್ಚು ಬಾರಿ ಪಡೆದ ಭಾರತೀಯ ಬೌಲರ್​ ಎನಿಸಿಕೊಂಡಿದ್ದಾರೆ.

ಕಿವೀಸ್​ ಓಪನರ್​ ವಿಲ್​ ಯಂಗ್(20) ವಿಕೆಟ್ ಪಡೆಯುವ ಮೂಲಕ ಅಶ್ವಿನ್​ 2021ರಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು. ಇದಕ್ಕೂ ಮುನ್ನ 2015, 2016, 2017ರಲ್ಲಿ 50+ ವಿಕೆಟ್ ಪಡೆದಿದ್ದರು. ಈ ವರ್ಷ ಸೇರಿದಂತೆ ಅಶ್ವಿನ್​ ವೃತ್ತಿ ಜೀವನದಲ್ಲಿ 4 ವರ್ಷ 50+ ವಿಕೆಟ್​ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಶ್ವಿನ್ ಹೊರತುಪಡಿಸಿದರೆ ಅನಿಲ್ ಕುಂಬ್ಳೆ(1999, 2004, 2006) ಮತ್ತು ಹರ್ಭಜನ್​ ಸಿಂಗ್(2001, 2002, 2008) ತಲಾ ಮೂರು ಬಾರಿ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಕಪಿಲ್​ ದೇವ್​ 1979 ಮತ್ತು 1983 ರಲ್ಲಿ ಈ ಸಾಧನೆ ಮಾಡಿದ್ದರು.

2021ರಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​

ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದಿರುವ ಅಶ್ವಿನ್​ 2021ರಲ್ಲಿ 51 ವಿಕೆಟ್​ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಶಾಹೀನ್ ಅಫ್ರಿದಿ 44 ಮತ್ತು ಹಸನ್​ ಅಲಿ 39 ಮತ್ತು ಅಕ್ಷರ್ ಪಟೇಲ್ 35 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: India vs New Zealand 2nd test : ನ್ಯೂಜಿಲ್ಯಾಂಡ್​ಗೆ 540 ರನ್​​ಗಳ ಗುರಿ ನೀಡಿದ ಭಾರತ

ABOUT THE AUTHOR

...view details