ಕೋಲ್ಕತ್ತಾ: ಟಿ20 ಪಂದ್ಯಗಳಲ್ಲಿ ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ರವಿಚಂದ್ರನ್ ಅಶ್ವಿನ್(Ravichandran Ashwin) ಅವರು ನಾಯಕನಾದವನಿಗೆ ಸದಾ ಆಕ್ರಮಣಕಾರಿ ಆಯ್ಕೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ( India captain Rohit Sharma) ಅನುಭವಿ ಸ್ಪಿನ್ನರ್ ಪರ ಪ್ರಶಂಸೆಯ ಮಾತನಾಡಿದ್ದಾರೆ.
ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಿಂದ ಭಾರತ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ಭಾರತ 3-0ಯಲ್ಲಿ ನ್ಯೂಜಿಲ್ಯಾಂಡ್(India sweep 3-0 against New Zealand) ವಿರುದ್ಧ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ನಾಲ್ಕು ವರ್ಷಗಳ ಕಾಲ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವಕಾಶ ವಂಚಿತನಾಗಿ ಕಳೆದ ಟಿ20 ವಿಶ್ವಕಪ್ನಲ್ಲಿ(T20 World Cup) ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ 35 ವರ್ಷದ ಅಶ್ವಿನ್(ashwin comeback) 3 ಪಂದ್ಯಗಳ ಕಿವೀಸ್ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಬ್ರೇಕ್ ತಂದು ಕೊಟ್ಟು ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದ್ದಾರೆ.
"ಅವರು(ಅಶ್ವಿನ್) ಯಾವಾಗಲೂ ನಾಯಕನ ಆಕ್ರಮಣಕಾರಿ ಆಯ್ಕೆಯಾಗಿರುತ್ತಾರೆ. ಅವರಂತಹ ಬೌಲರ್ಗಳು ನಿಮ್ಮ ತಂಡದಲ್ಲಿದ್ದಾಗ ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆಯಲು ನಿಮಗೆ ಸದಾ ಒಂದು ಉತ್ತಮ ಅವಕಾಶವಿರುತ್ತದೆ" ಎಂದು ಕಿವೀಸ್ ವಿರುದ್ಧ 73 ರನ್ಗಳಿಂದ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾತಿಳಿಸಿದ್ದಾರೆ.