ಹೈದರಾಬಾದ್(ಸ್ಪೋರ್ಟ್ಸ್ ಡೆಸ್ಕ್): ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 7 ವಿಕೆಟ್ ಪಡೆದರೆ ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಪ್ರಸ್ತುತ ಅಶ್ವಿನ್ 81 ಟೆಸ್ಟ್ ಪಂದ್ಯಗಳಿಂದ 427 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದು ಗರಿಷ್ಠ ವಿಕೆಟ್ ಪಡೆದ ವೇಗಿ ಮತ್ತು ಭಾರತದ ಪರ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ(619) ನಂತರದ ಸ್ಥಾನದಲ್ಲಿದ್ದಾರೆ.