ಸಾತಾಂಪ್ಟನ್: ಭಾರತ ತಂಡದ ಸ್ಪಿನ್ ಬೌಲರ್ ಮತ್ಯು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಶ್ ಪಡೆ ಬುಧವಾರ ಅಂತ್ಯಗೊಂಡ ಚೊಚ್ಚಲ ಟೆಸ್ಟ್ ಚಾಂಪಿಯನ್ ಗೆದ್ದು ಬೀಗಿದೆ. ಎರಡು ವರ್ಷಗಳ ಕಾಲ ನಡೆದ ಟೂರ್ನಿಯಲ್ಲಿ ಕೆಲವು ವೈಯಕ್ತಿಕ ದಾಖಲೆ ಟೆಸ್ಟ್ ಕ್ರಿಕೆಟ್ ಬೆಳೆಸುವ ಐಸಿಸಿ ಯೋಜನೆಗೆ ಬಲ ತುಂಬಿದೆ. ಎರಡು ವರ್ಷಗಳಲ್ಲಿ ಕೆಲವು ವಿಶೇಷ ದಾಖಲೆಗಳಿಗೆ ಪಾತ್ರರಾದ ಕ್ರಿಕೆಟಿಗರ ಸಾಧನೆ ಇಲ್ಲಿದೆ.
ಗರಿಷ್ಠ ವಿಕೆಟ್: ರವಿಚಂದ್ರನ್ ಅಶ್ವಿನ್(71)
ಭಾರತ ತಂಡದ ರವಿಚಂದ್ರನ್ ಅಶ್ವಿನ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಬುಧವಾರ WTCಯ ಕೊನೆಯ ದಿನ ಕಿವೀಸ್ನ 2 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರನ್ನು(70) ಹಿಂದಿಕ್ಕಿ ಟೂರ್ನಿ ಶ್ರೇಷ್ಠ ಬೌಲರ್ ಎನಿಸಿಕೊಂಡರು.
ಹೆಚ್ಚು 5 ವಿಕೆಟ್ ಗೊಂಚಲು: ಕೈಲ್ ಜೆಮೀಸನ್(5)
ನ್ಯೂಜಿಲ್ಯಾಂಡ್ ಆಲ್ರೌಂಡರ್ ಕೈಲ್ ಜೆಮೀಸ್ನ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಚೊಚ್ಚಲ ಟೂರ್ನಿಯ ಫೈನಲ್ ಸೇರಿದಂತೆ ಕಿವೀಸ್ ಸ್ಟಾರ್ ಒಟ್ಟು 8 ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.