ಕರ್ನಾಟಕ

karnataka

ETV Bharat / sports

ಐಪಿಎಲ್ ಇತಿಹಾಸದಲ್ಲಿ 'ರಿಟೈರ್ಡ್​ ಔಟ್​' ಆದ ಮೊದಲಿಗ ಅಶ್ವಿನ್​! - LSG vs RR live

ಲಖನೌ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಅವರು 23 ಎಸೆತಗಳಲ್ಲಿ 28 ರನ್​ಗಳಿಸಿದ್ದ ವೇಳೆ ರಿಟೈರ್ಡ್​ ಔಟ್​ ಆಗಿ ಮೈದಾನ ತೊರೆದು ರಿಯಾನ್ ಪರಾಗ್​ಗೆ ಬ್ಯಾಟಿಂಗ್ ಮಾಡುವುದಕ್ಕೆ ಅನುವು ಮಾಡಿಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.

Ashwin becomes first batter to be tactically retired out in IPL
Ashwin becomes first batter to be tactically retired out in IPL

By

Published : Apr 10, 2022, 11:00 PM IST

ಮುಂಬೈ: ರವಿಚಂದ್ರನ್ ಅಶ್ವಿನ್​, ಕ್ರಿಕೆಟ್​​ನಲ್ಲಿರುವ ಕಾನೂನುಗಳನ್ನು ಪಾಲಿಸುವುದರಲ್ಲಿ ಅಥವಾ ಜಾರಿಗೆ ತರುವುದರಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಿಟೈಡ್​ ಔಟ್​ ಅಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ವಿಕೆಟ್​ ನೀಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

2018ರಲ್ಲಿ ಪಂಜಾಬ್ ಪರ ಆಡುವಾಗ ನಾನ್​ ಸ್ಟ್ರೈಕ್​ನಲ್ಲಿ ಕ್ರೀಸ್​ ಬಿಟ್ಟು ಹೋಗಿದ್ದ ಜಾಸ್​ ಬಟ್ಲರ್​ರನ್ನು ಮಂಕಡ್​ ಮಾಡುವ ಮೂಲಕ ಔಟ್​ ಮಾಡಿದ್ದರು. ಇದನ್ನು ಬಹುಪಾಲು ವಿಶ್ಲೇಷಕರು ಮತ್ತು ಮಾಜಿ ಕ್ರಿಕೆಟಿಗರು ಟೀಕಿಸಿದರೂ, ಅದಕ್ಕೆಲ್ಲಾ ಕ್ರಿಕೆಟ್​ ಪುಸ್ತಕದಲ್ಲಿರುವ ಕಾನೂನುಗಳಿಂದ ವಿವರಣೆ ನೀಡಿ ತಿರುಗೇಟು ನೀಡಿದ್ದರು. ಇದು ದೊಡ್ಡ ವಿವಾದವಾದರೂ ಅದಕ್ಕೆಲ್ಲಾ ಡೋಂಟ್ ಕೇರ್​ ಎಂದಿದ್ದರು. ಕೊನೆಗೆ ಎಂಸಿಸಿ ಮಂಕಡ್​ ಅನ್ನು ರನ್​ಔಟ್​ ಎಂದು ಕಾನೂನನ್ನು ರಚಿಸಿದ್ದು, ಐಪಿಎಲ್​ನಲ್ಲೂ ಮಂಕಡ್​ಗೆ ರನ್​ಔಟ್ ಎಂದು ಈಗಾಗಲೇ ಘೋಷಿಸಲಾಗಿದೆ.

ಇದೀಗ ಮತ್ತೆ ಅಶ್ವಿನ್​ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಇಂದು ಲಖನೌ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಅವರು 23 ಎಸೆತಗಳಲ್ಲಿ 28 ರನ್​ಗಳಿಸಿದ್ದ ವೇಳೆ ರಿಟೈರ್ಡ್​ ಔಟ್​ ಆಗಿ ಮೈದಾನ ತೊರೆದು ರಿಯಾನ್ ಪರಾಗ್​ಗೆ ಬ್ಯಾಟಿಂಗ್ ಮಾಡುವುದಕ್ಕೆ ಅನುವು ಮಾಡಿಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟರ್​ಗಳು ಮಾತ್ರ ರಿಟೈರ್ಡ್​ ಔಟ್​ ಆಗಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ, ಭೂತಾನ್​ನ ಸೋನಮ್ ಟಾಬ್ಗೆ, ಕುಮಿಲಾ ವಾರಿಯರ್ಸ್​​ನ ಸಂಜಮುಲ್ ಇಸ್ಲಾಮ್​ ಈ ರೀತಿ ವಿಕೆಟ್ ಒಪ್ಪಿಸಿದ್ದರು.

ಎಂಸಿಸಿ 25.4.3 ಕಾನೂನಿನ ನಿಯಮದ ಪ್ರಕಾರ ಯಾವುದೇ ಬ್ಯಾಟರ್​ ಯಾವುದೇ ಆನಾರೋಗ್ಯ, ಗಾಯ (ನಿಯಮ 25.4.2) ಆಗದೆ ಮೈದಾನ ತೊರೆದರೆ ಆತ ಎದುರಾಳಿ ತಂಡದ ನಾಯಕ ಒಪ್ಪಿದರೆ ಮಾತ್ರ ಮತ್ತೆ ಬ್ಯಾಟಿಂಗ್ ಮುಂದುವರಿಸಬಹುದು. ಒಂದು ವೇಳೆ ಆತನ ಇನ್ನಿಂಗ್ಸ್​ ಮುಂದುವರಿಯದಿದ್ದರೆ, ಅದನ್ನು ರಿಟೈರ್ಡ್ ಔಟ್​ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ:ಮೆಗಾ ಹರಾಜಿಗೂ ಮುಂಬೈ ಇಂಡಿಯನ್ಸ್​ಗೂ ಆಗಿಬರಲ್ವಾ? ಹೌದು ಎನ್ನುತ್ತಿವೆ ದಾಖಲೆಗಳು!

ABOUT THE AUTHOR

...view details