ಕರ್ನಾಟಕ

karnataka

ETV Bharat / sports

WTC: ಗರಿಷ್ಠ ವಿಕೆಟ್ ಪಡೆದ ದಾಖಲೆ ಬರೆದ ಆರ್.​ ಅಶ್ವಿನ್

ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಆರ್.​ ಅಶ್ವಿನ್ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಪಡೆದಿದ್ದರು. ಕೊನೆಯ ದಿನವಾದ ಇಂದು ಆರಂಭಿಕರಾದ ಟಾಮ್ ಲ್ಯಾಥಮ್ ಮತ್ತು ಡಿವೋನ್ ಕಾನ್ವೆ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಹಿಂದಿಕ್ಕಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್ ಎನಿಸಿಕೊಂಡರು.

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

By

Published : Jun 23, 2021, 9:53 PM IST

ಸೌತಾಂಪ್ಟನ್​:ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್​ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಆರ್.​ ಅಶ್ವಿನ್ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಪಡೆದಿದ್ದರು. ಕೊನೆಯ ದಿನವಾದ ಇಂದು ಆರಂಭಿಕರಾದ ಟಾಮ್ ಲ್ಯಾಥಮ್ ಮತ್ತು ಡಿವೋನ್ ಕಾನ್ವೆ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಹಿಂದಿಕ್ಕಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್ ಎನಿಸಿಕೊಂಡರು.

ಆಸೀಸ್ ಪೇಸರ್ 14 ಪಂದ್ಯಗಳಿಂದ 70 ವಿಕೆಟ್​ ಪಡೆದಿದ್ದರು. ಅಶ್ವಿನ್ ಕೂಡ ಅಷ್ಟೇ ಪಂದ್ಯಗಳಿಂದ 71 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 4 ಬಾರಿ 5 ವಿಕೆಟ್​ ಪಡೆದಿದ್ದರೆ, ಕಮಿನ್ಸ್ ಕೇವಲ ಒಂದು ಬಾರಿ 5 ವಿಕೆಟ್ ಪಡೆದಿದ್ದಾರೆ. ಆಶ್ವಿನ್ ಬಿಟ್ಟರೆ ವೇಗಿ ಮೊಹಮ್ಮದ್ ಶಮಿ 11 ಪಂದ್ಯಗಳಿಂದ 40 ವಿಕೆಟ್ ಪಡೆದಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ಗಳು

  • ರವಿಚಂದ್ರನ್ ಅಶ್ವಿನ್- 14 ಪಂದ್ಯ 71 ವಿಕೆಟ್
  • ಪ್ಯಾಟ್​ ಕಮಿನ್ಸ್​- 14 ಪಂದ್ಯ 70 ವಿಕೆಟ್
  • ಸ್ಟುವರ್ಟ್​ ಬ್ರಾಡ್​- 17 ಪಂದ್ಯ 69 ವಿಕೆಟ್
  • ಟಿಮ್ ಸೌಥಿ- 11 ಪಂದ್ಯ 56 ವಿಕೆಟ್​
  • ನಥನ್ ಲಿಯಾನ್- 14 ಪಂದ್ಯ 56 ವಿಕೆಟ್

ABOUT THE AUTHOR

...view details