ಮೆಲ್ಬೋರ್ನ್:ಆ್ಯಶಸ್ ಸರಣಿಯಲ್ಲಿ ಈಗಾಗಲೇ 2-0 ಅಂತರದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ಗೆ ಕೋವಿಡ್ ಭೀತಿ ಎದುರಾಗಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಆಂಗ್ಲರ ಕ್ಯಾಂಪ್ನಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನ ಎರಡನೇ ದಿನದ ಆರಂಭಕ್ಕೂ ಕೆಲಗಂಟೆಗಳ ಮುನ್ನ ತಂಡದ ಕ್ಯಾಂಪನ್ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಇಬ್ಬರು ಕುಟುಂಬ ಸದಸ್ಯರಿಗೆ ಕೋವಿಡ್ ತಗುಲಿರುವುದು ಗೊತ್ತಾಗಿದೆ. ಕ್ರೀಡಾಂಗಣಕ್ಕೆ ಹೊರಡುವ ಮುನ್ನ ತಂಡ ಹಾಗೂ ಇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮೂರನೆ ದಿನದಾಟವು ಸುಮಾರು ಅರ್ಧಗಂಟೆ ತಡವಾಗಿ ಆರಂಭವಾಗಿದೆ. 'ಇಂಗ್ಲೆಂಡ್ ಕ್ರಿಕೆಟ್ ತಂಡದ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬದ ಇಬ್ಬರಿಗೆ ಕೋವಿಡ್ -19 ತಗುಲಿದೆ. ಸೋಂಕಿತರು ಸದ್ಯ ತಂಡದಿಂದ ಪ್ರತ್ಯೇಕವಾಗಿ ಇದ್ದಾರೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.