ದುಬೈ : ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ ಹಳೆಯ ಶೈಲಿಯ ಟೆಸ್ಟ್ ನಾಯಕ ಮತ್ತೊಬ್ಬ ಲೆಜೆಂಡರಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕಮ್ಮಿನ್ಸ್ ಅವರು ಮೈದಾನದಲ್ಲಿ ಆಟದ ಕುರಿತು ಯೋಜನೆಗಳನ್ನು ಬಿಚ್ಚಿಡಲು ಅವಕಾಶ ನೀಡುತ್ತಾರೆ. ಹಾಗೆಯೇ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ತಮ್ಮ ತಂಡದ ಬೌಲರ್ಸ್ ಬೌಲಿಂಗ್ ಮಾಡುವಾಗ ಪ್ರತಿ ಎಸೆತದಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ ಎನ್ನುವ ಮೂಲಕ ಇಬ್ಬರು ನಾಯಕರನ್ನು ಗುಣಗಾನ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯಲ್ಲಿ ಇಬ್ಬರು ಹೊಸ ನಾಯಕರ ನಿರ್ಧಾರಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಡಿಕ್ಲೇರ್ ಮಾಡಬೇಕು ಎಂಬ ಸ್ಟೋಕ್ಸ್ ನೀಡಿದ ಕರೆಯನ್ನು ಮಾಧ್ಯಮಗಳು ಮತ್ತು ಕ್ರಿಕೆಟ್ ಪಂಡಿತರು ಪ್ರತ್ಯೇಕ ರೀತಿಯಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ. ಬಳಿಕ ಸತತ 2 ಎರಡು ಸೋಲು ಕಂಡು ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು.
ಆದರೆ ಈ ಪಂದ್ಯದಲ್ಲಿ ಕಮ್ಮಿನ್ಸ್ ಅವರು ಸ್ಪಿನ್ನರ್ ಟಾಡ್ ಮರ್ಫಿ ಅವರಿಂದ ಕೇವಲ 2 ಓವರ್ ಮಾಡಿಸಿರುವುದು ಏಕೆ ಎಂಬುದು ಎಲ್ಲರ ಹುಬ್ಬುಗಳನ್ನು ಹೆಚ್ಚಿಸಿದೆ. ಬಹುಶಃ ಎರಡು ವಿಭಿನ್ನ ಶೈಲಿಯ ಆಟ ಹಾಗೂ ಎರಡು ನಾಯಕತ್ವದ ವ್ಯತಿರಿಕ್ತ ಶೈಲಿಗಳ ಕಾರಣದಿಂದಾಗಿ ಇದು ನಾನು ನೆನಪಿಡುವ ಅತ್ಯಂತ ಮುಖ್ಯವಾದ ಯುದ್ಧತಂತ್ರ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಪಾಂಟಿಂಗ್ ತಿಳಿಸಿದ್ದಾರೆ.
2021 ರ ಆಶಸ್ ಟೆಸ್ಟ್ ಸರಣಿಗೆ ಮುಂಚಿತವಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ಟಿಮ್ ಪೈನ್ ಅವರ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದರು. ನಂತರ ಟೆಸ್ಟ್ ನಾಯಕನಾಗಿ ಕಮ್ಮಿನ್ಸ್ ಉತ್ತಮ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯನ್ ವೇಗದ ಬೌಲಿಂಗ್ ಮುಂಚೂಣಿಯ ತನ್ನ ನಾಯಕತ್ವದಲ್ಲಿ ಕೊನೆಯ ಆಶಸ್ ಸರಣಿಯನ್ನು 4-0 ಅಂತರದಲ್ಲಿ ಆಸ್ಟ್ರೇಲಿಯ ಗೆದ್ದುಕೊಂಡಿತ್ತು. ಬಳಿಕ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದಿತು. ಆಸ್ಟ್ರೇಲಿಯಾ ಕಳೆದ ವರ್ಷ ಮಾತ್ರ ಶ್ರೀಲಂಕಾ ವಿರುದ್ಧ 1-1 ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.