ಲಂಡನ್:ಆ್ಯಶಸ್‌ನ ಎರಡನೇ ಟೆಸ್ಟ್ (Ashes Second Test) ಕುತೂಹಲಕಾರಿ ಆರಂಭವನ್ನು ಪಡೆದುಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಕಾಂಗರೂಗಳು ದಿನದಂತ್ಯ ಆಟಕ್ಕೆ ಓವರ್‌ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
ಶತಕದ ಹಾದಿಯಲ್ಲಿ ಸ್ವೀವ್ ಸ್ಮಿತ್:ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿರುವ ಸ್ಟೀವ್ ಸ್ಮಿತ್ 85 ರನ್ ಕಲೆಹಾಕಿ ಶತಕದ ಹಾದಿಯಲ್ಲಿದ್ದಾರೆ. 77 ರನ್ ಕಲೆ ಹಾಕಿದ್ದ ಟ್ರಾವಿಸ್ ಹೆಡ್ ಉತ್ತಮವಾಗಿಯೇ ಪ್ರದರ್ಶನ ತೋರಿ ಪೆವಿಲಿಯನ್ ಹಾದಿ ಹಿಡಿದರು. ಇಂಗ್ಲೆಂಡ್ ಬೌಲರ್‌ಗಳ ಬೇವರಿಳಿಸಿದ ಡೇವಿಡ್ ವಾರ್ನರ್ 66 ರನ್ಗಳಿಸಿ ಔಟಾದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು 47 ರನ್ ಗಳಿಸಿ ಔಟಾಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. 70 ಎಸೆತಗಳನ್ನು ಎದುರಿಸಿರುವ ಉಸ್ಮಾನ್ ಖವಾಜಾ ಕೇವಲ 17 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆಟದ ಅಂತ್ಯದಲ್ಲಿ ಅಲೆಕ್ಸ್ ಕ್ಯಾರಿ 11 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ:ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಆಂಗ್ಲ ಬೌಲರ್‌ಗಳ ಬೇವರಿಳಿಸಿದರು. ಆದರೆ ಖವಾಜಾ ಮಾತ್ರ ನಿಧಾನವಾಗಿಯೇ ಬ್ಯಾಟ್ ಬೀಸುತ್ತಿದ್ದರು. ಕೇವಲ 66 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಆಂಡರ್ಸನ್ ಮತ್ತು ಬ್ರಾಡ್ ಜೊತೆಗೆ ಓಲಿ ರಾಬಿನ್ಸನ್ ಆರಂಭಿಕರ ವಿಕೆಟ್ ತೆಗೆಯುವಲ್ಲಿ ವಿಫಲಗೊಂಡರು. ಆದರೆ, ಯುವ ವೇಗಿ ಜೋಶ್ ಟಂಗ್ ಇಂಗ್ಲೆಂಡ್‌ಗೆ ರಿಲೀಫ್ ನೀಡಿದರು.