ಕರ್ನಾಟಕ

karnataka

ETV Bharat / sports

Ashes Test: 2ನೇ ಟೆಸ್ಟ್​ಗೂ ಮುನ್ನ ಆಸೀಸ್​ಗೆ ಶಾಕ್​.. ಗಾಯದಿಂದ ತಂಡದ ಪ್ರಮುಖ ವೇಗಿ ಔಟ್​ - ಜೋಶ್ ಹ್ಯಾಜಲ್‌ವುಡ್

ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್‌ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ದೊಡ್ಡ ಆಘಾತ ಎದುರಾಗಿದೆ. ಗಾಯದಿಂದ ತಂಡದ ಪ್ರಮುಖ ವೇಗಿ ಅಹರ್ನಿಶಿ (ಹಗಲು-ರಾತ್ರಿ) ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

Ashes Test
ಅಡಿಲೇಡ್‌ ಆ್ಯಶಸ್ ಟೆಸ್ಟ್‌

By

Published : Dec 13, 2021, 8:15 AM IST

ಮೆಲ್ಬೋರ್ನ್:ಗಾಯದ ಕಾರಣ ಆಸ್ಟ್ರೇಲಿಯಾದ ವೇಗಿ ಜೋಶ್ ಹೆಜಲ್​ವುಡ್​ ಗುರುವಾರದಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹೆಜಲ್​ವುಡ್ ಗಾಯಗೊಂಡಿದ್ದರು.

ಬ್ರಿಸ್ಬೇನ್‌ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್​ಗೆ ಒಂಬತ್ತು ವಿಕೆಟ್‌ಗಳ ಸೋಲುಣಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಹೆಜಲ್​ವುಡ್​ 3 ವಿಕೆಟ್​ ಕಬಳಿಸಿದ್ದರು.

ಗುರುವಾರದಿಂದ ಪ್ರಾರಂಭವಾಗುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಜೋಶ್​​ ಅಲಭ್ಯರಾಗಿದ್ದು, ಚಿಕಿತ್ಸೆಗಾಗಿ ಭಾನುವಾರ ಸಿಡ್ನಿಗೆ ಮರಳಿದ್ದಾರೆ. ಹೀಗಾಗಿ ಈ​ ಪಂದ್ಯಕ್ಕೆ 11ರ ಬಳಗದಲ್ಲಿ ಹೆಜಲ್​ವುಡ್​ ಸ್ಥಾನಕ್ಕೆ ಜೈ ರಿಚರ್ಡ್‌ಸನ್ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೆಜಲ್​ವುಡ್​ ಅಲಭ್ಯತೆಯು ಆಸೀಸ್​ಗೆ​ ಬಹುದೊಡ್ಡ ಹಿನ್ನಡೆಯಾಗಲಿದೆ. ಈ ಹಿಂದೆ ಹೆಜಲ್​ವುಡ್​, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯೋನ್ ಅವರಿದ್ದ ಬೌಲಿಂಗ್ ಪಡೆಯು​ ಎಲ್ಲಾ ಆರು ಆಶಸ್ ಟೆಸ್ಟ್‌ಗಳನ್ನು ಗೆದ್ದಿರುವ ದಾಖಲೆ ಹೊಂದಿದೆ.

ಅಲ್ಲದೆ, ಹೆಜಲ್​ವುಡ್ ಹಗಲು-ರಾತ್ರಿ ಟೆಸ್ಟ್‌ಗಳಲ್ಲಿ ಕೇವಲ 19.90 ಸರಾಸರಿ ಹೊಂದಿದ್ದು, ಏಳು ಪಂದ್ಯಗಳಲ್ಲಿ 32 ವಿಕೆಟ್‌ಗಳೊಂದಿಗೆ ಸ್ಟಾರ್ಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.

ವೇಗದ ಬೌಲರ್‌ಗಳಾದ ಮೈಕೆಲ್ ನೆಸರ್, ಜೈ ರಿಚರ್ಡ್‌ಸನ್ ಮತ್ತು ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಅವರು ಇಂದು ಬೆಳಗ್ಗೆ ಅಡಿಲೇಡ್​ನಲ್ಲಿ 14 ಮಂದಿಯ ತಂಡವನ್ನು ಸೇರಿಕೊಂಡಿದ್ದಾರೆ.

Vijay Hazare Trophy: ಹ್ಯಾಟ್ರಿಕ್​​ ಸೆಂಚುರಿ ಸಿಡಿಸಿದ ಗಾಯಕ್ವಾಡ್​.. ಆಫ್ರಿಕಾ ವಿರುದ್ಧದ ODI ಸರಣಿಗೆ ಸಿಗುತ್ತಾ ಚಾನ್ಸ್​!?

ABOUT THE AUTHOR

...view details