ಮೆಲ್ಬೋರ್ನ್ :ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿರುವ ಪ್ರವಾಸಿ ಇಂಗ್ಲೆಂಡ್ ತಂಡ ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲೂ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಸೋಲುವ ಭೀತಿ ಎದುರಿಸುತ್ತಿದೆ.
ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 185 ರನ್ಗಳಿಗೆ ಆಲೌಟ್ ಆಗಿದ್ದ ಆಂಗ್ಲರು, ಸೋಮವಾರ ಆಸ್ಟ್ರೇಲಿಯಾ ತಂಡವನ್ನು 267 ರನ್ಗಳಿಗೆ ನಿಯಂತ್ರಿಸಿದರು.
ಆದರೆ, 2ನೇ ಇನ್ನಿಂಗ್ಸ್ನಲ್ಲಿ 82 ರನ್ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿ ಕೇವಲ 31 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಜಾಕ್ ಕ್ರಾಲೆ 5 ಮತ್ತು ಡೇವಿಡ್ ಮಲನ್ ಗೋಲ್ಡನ್ ಡಕ್ ಆದರೆ, ಸ್ಕಾಟ್ ಬೊಲೆಂಡ್ ಬೌಲಿಂಗ್ನಲ್ಲಿ ಹಸೀಬ್ ಹಮೀದ್ 7 ಮತ್ತು ಜಾಕ್ ಲೀಚ್ ಖಾತೆ ತೆರೆಯದೇ ಅದೇ ಓವರ್ನಲ್ಲಿ ಬೌಲ್ಡ್ ಆದರು.
ಪ್ರಸ್ತುತ ಇಂಗ್ಲೆಂಡ್ 2ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 31 ರನ್ಗಳಿಸಿ, ಇನ್ನೂ 51 ರನ್ಗಳ ಇನ್ನಿಂಗ್ಸ್ ಹಿನ್ನಡೆ ಹೊಂದಿದೆ. ನಾಯಕ ಜೋ ರೂಟ್ 12 ಮತ್ತು ಬೆನ್ ಸ್ಟೋಕ್ಸ್ 2 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.