ಹೋಬರ್ಟ್:ಮಾರ್ಕ್ವುಡ್ರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು 155 ಕ್ಕೆ ಆಲೌಟ್ ಮಾಡಿರುವ ಇಂಗ್ಲೆಂಡ್ ತಂಡ ಕೊನೆಯ ಆ್ಯಶಸ್ ಪಂದ್ಯವನ್ನು ಗೆಲ್ಲುವುದಕ್ಕೆ 271 ರನ್ಗಳ ಗುರಿ ಪಡೆದಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 303 ರನ್ಗಳಿಸಿತ್ತು ಇದಕ್ಕುತ್ತರವಾಗಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 188ಕ್ಕೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಸಿಕ್ಕ 115 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಅತಿಥೇಯ ತಂಡ 2ನೇ ಇನ್ನಿಂಗ್ಸ್ನಲ್ಲಿ ಕೇವಲ 155ಕ್ಕೆ ಆಲೌಟ್ ಆಯಿತು. ಒಟ್ಟಾರೆ ಮೊದಲ ಇನ್ನಿಂಗ್ಸ್ ಮುನ್ನಡೆ ಸೇರಿ ಆಂಗ್ಲರಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು.
ಅಲೆಕ್ಸ್ ಕ್ಯಾರಿ 49 ರನ್ಗಳಿಸಿ ತಂಡದ ಗರಿಷ್ಠ ಮೊತ್ತದ ಬ್ಯಾಟರ್ ಆದರು. ಇವರನ್ನು ಹೊರತುಪಡಿಸಿದರೆ, ಕ್ರಿಸ್ ಗ್ರೀನ್ 23, ಸ್ಮಿತ್ 27 ರನ್ಗಳಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ 37 ರನ್ ನೀಡಿ 6 ವಿಕೆಟ್ ಪಡೆದರು. ಸ್ಟುವರ್ಟ್ ಬ್ರಾಡ್ 51ಕ್ಕೆ 3 ವಿಕೆಟ್ ಪಡೆದು ಮಿಂಚಿದರು.