ಲಾರ್ಡ್ಸ್ (ಲಂಡನ್): ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಎರಡನೇ ಟೆಸ್ಟ್ನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಆಂಗ್ಲ ಪಾಳಯಕ್ಕೆ ನಾಯಕ ಗೆಲುವಿ ಸಾಧ್ಯತೆಗಳನ್ನು ನೀಡುತ್ತಿದ್ದಾರೆ. ಆದರೆ ಅವರಿಗೆ ಕ್ರೀಸ್ನಲ್ಲಿ ಇತರೆ ಬ್ಯಾಟರ್ಗಳ ಸಾಥ್ ಸಹ ಬೇಕಾಗಿದೆ. ಆದರೆ ಇಂಗ್ಲೆಂಡ್ ನಾಯಕ ಶತಕವನ್ನು ತಮ್ಮ ಬೇಸ್ಬಾಲ್ ನೀತಿಯಲ್ಲಿ ಗಳಿಸಿದ್ದು ವಿಶೇಷವಾಗಿತ್ತು. ವಿಕೆಟ್ ಕಳೆದುಕೊಂಡಿದ್ದರೂ, ಒಂದು ಓವರ್ನಲ್ಲಿ 24 ರನ್ ಹೊಡೆಯುವ ಮೂಲಕ ಶತಕವನ್ನು ದಾಖಲಿಸಿದರು.
56ನೇ ಓವರ್ ಮಾಡಲು ಬಂದ ಗ್ರೀನ್ ಓವರ್ನಲ್ಲಿ 24 ರನ್ ಗಳಿಸಿದರು. ಒಂದು ಬೌಂಡರಿ ಮತ್ತು ಮೂರು ಸಿಕ್ಸ್ ಗಳಿಸಿದ್ದಲ್ಲದೇ ಒಂದು ರನ್ ಓಡಿ ಗಳಿಸಿದರು ಇದರಿಂದ ಅವರು 101 ರನ್ ಪೂರ್ಣಗೊಳಿಸಿದರು. ಬೆನ್ ಸ್ಟೋಕ್ಸ್ 126 ಬಾಲ್ಗಳನ್ನು ಎದುರಿಸಿದ್ದ 62 ರನ್ ಗಳಿಸಿದ್ದಾಗ ಜಾನಿ ಬೈರ್‌ಸ್ಟೋವ್ ಔಟ್ ಆದರು. ನಂತರ ಬೆನ್ ಸ್ಟೋಕ್ಸ್ ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿ ಕೇವಲ 21 ಬಾಲ್ನಲ್ಲಿ 46 ರನ್ ಗಳಿಸಿ ಶತಕ ಮಾಡಿಕೊಂಡರು. 4ನೇ ಇನ್ನಿಂಗ್ಸ್‌ನಲ್ಲಿ 3 ಶತಕಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ.
ಇಂದು ಇಂಗ್ಲೆಂಡ್ ಗೆಲುವಿಗೆ 257 ರನ್ ಅಗತ್ಯ ಇತ್ತು. ಇಂದು ಮೊದಲ ಸೆಷನ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ 129 ರನ್ ಗಳಿಸಿದೆ. ಬೆನ್ ಡಕೆಟ್ ಮತ್ತು ನಾಯಕ ಸ್ಟೋಕ್ಸ್ ಜೋಡಿ ಇಂದು ಆಂಗ್ಲ ತಂಡಕ್ಕೆ ಉತ್ತಮ ಆಸರೆ ಆದರಲ್ಲದೇ ಅವರ ಬೇಸ್ಬಾಲ್ ನೀತಿಯಂತೆ ಬ್ಯಾಟ್ ಬೀಸಿದರು. ಇದರಿಂದ ಆಸ್ಟ್ರೇಲಿಯಾ ಬಳಿ ಇದ್ದ ಗೆಲ್ಲುವ ಅವಕಾಶ ನಿಧಾನವಾಗಿ ಇಂಗ್ಲೆಂಡ್ ಕಡೆ ವಾಲಿದೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು.