ಲಾರ್ಡ್ಸ್ (ಲಂಡನ್): ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂದಿನಿಂದ ಎರಡನೇ ಆ್ಯಶಸ್ ಕದನ ಆರಂಭವಾಗಲಿದೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ನ್ನು 2 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಟೆಸ್ಟ್ನಲ್ಲಿ ಸತತ ಗೆಲುವುಗಳನ್ನು ಕಂಡು ಹಮ್ಮಿನಿಂದ ಬೀಗುತ್ತಿದ್ದ ಇಂಗ್ಲೆಂಡ್ಗೆ ಆ್ಯಶಸ್ ಸರಣಿಯ ಮೊದಲ ಸೋಲು ಆಘಾತ ತಂಡಿದೆ. ಇದರಿಂದ ಚೇತರಿಸಿಕೊಳ್ಳಲು ಎರಡನೇ ಟೆಸ್ಟ್ ಅನ್ನು ಗೆಲ್ಲುವ ಚಿಂತನೆಯಲ್ಲಿದೆ.
ಉತ್ತಮ ಲಯದಲ್ಲಿರುವ ಪ್ಯಾಟ್ ಕಮಿನ್ಸ್ ನಾಯಕತ್ವದ ತಂಡ ತಮ್ಮ ಗೆಲುವನ್ನು ಮುಂದುವರೆಸಿಕೊಂಡು ಹೋಗಲು ನೋಡುತ್ತಿದೆ. ಆ್ಯಶಸ್ ಸರಣಿಗೂ ಮೊದಲು ಇಂಗ್ಲೆಂಡ್ ನೆಲದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ಭಾರತೀಯ ಬ್ಯಾಟರ್ಗಳನ್ನು ಕಟ್ಟಿಹಾಕಿ ಐಸಿಸಿ ಚಾಂಪಿಯನ್ ಪಟ್ಟ ಅಂಕರಿಸಿತ್ತು. ಅದಾದ ನಂತರ ಮೊದಲ ಟೆಸ್ಟ್ ಗೆದ್ದಿರುವ ಆಸಿಸ್ ಎರಡನೇ ಪಂದ್ಯ ಗೆದ್ದು ಲಂಡನ್ ನೆಲದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಲು ಮುಂದಾಗಿದೆ.
5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆಯಲ್ಲಿರುವ ಕಾಂಗರೂಪಡೆ ಇಂದಿನಿಂದ ಆರಂಭವಾಗುತ್ತಿರುವ ಪಂದ್ಯದಲ್ಲಿ ಬಲಿಷ್ಠ ಬೆನ್ ಸ್ಟೋಕ್ಸ್ ಪಡೆ ಕಟ್ಟಿಹಾಕಲಿದೆ ಎಂಬ ನಿರೀಕ್ಷೆಗಳಿದೆ. 2021-22 ರ ಆ್ಯಶಸ್ ಸರಣಿ ಕಾಂಗರೂ ನಾಡಿನಲ್ಲಿ ನಡೆದಿತ್ತು. ಆಗ ಇಂಗ್ಲೆಂಡ್ ಒಂದು ಟೆಸ್ಟ್ನ್ನು ಡ್ರಾ ಮಾಡಿಕೊಂಡು ಕ್ಲೀನ್ ಸ್ವೀಪ್ ಎಂಬ ಅಪಮಾನದಿಂದ ತಪ್ಪಿಸಿಕೊಂಡಿತ್ತು. ಈ ಬಾರಿ ಇಂಗ್ಲೆಂಡ್ನಲ್ಲಿ ಪಂದ್ಯಗಳು ನಡೆಯುತ್ತಿದ್ದು, ತವರು ನೆಲದಲ್ಲಿ ಸರಣಿ ವಶ ಪಡಿಸಿಕೊಳ್ಳಲು ಇಂಗ್ಲೆಂಡ್ ಹವಣಿಸುತ್ತಿದೆ.
ಮೊದಲ ಟೆಸ್ಟ್ನಲ್ಲಿ ಬೇಸ್ಬಾಲ್ನ ರೀತಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಜೋ ರೂಟ್ ಅವರ 118* ಮತ್ತು ಜಾನಿ ಬೈರ್‌ಸ್ಟೋವ್ ಅವರ 78 ರನ್‌ಗಳೊಂದಿಗೆ 393 ಕ್ಕೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ, ಉಸ್ಮಾನ್ ಖವಾಜಾ ಅವರ ಅತ್ಯುತ್ತಮ 141 ಮತ್ತು ಅಲೆಕ್ಸ್ ಕ್ಯಾರಿ ಅವರ 66 ರನ್‌ಗಳೊಂದಿಗೆ 386 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ತಂಡಕ್ಕೆ 281 ರನ್‌ಗಳ ಗುರಿಯನ್ನು ನೀಡಿತು. ಗೆಲುವು ಇಂಗ್ಲೆಂಡ್ಗೆ ಸನಿಹದಲ್ಲಿದ್ದರೂ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಪಂದ್ಯವನ್ನು ಬಿಟ್ಟುಕೊಡದೇ ಕೊನೆಯಲ್ಲಿ ಹೋರಾಡಿ ಎರಡು ವಿಕೆಟ್ನಿಂದ ಗೆದ್ದುಕೊಂಡರು.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ಟಾಡ್ ಮರ್ಫಿ , ಮೈಕೆಲ್ ನೆಸರ್, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಡಬ್ಲ್ಯೂ ಟಂಗ್, ಕ್ರಿಸ್ , ಮಾರ್ಕ್ ವುಡ್
ಇದನ್ನೂ ಓದಿ:ವಿರಾಟ್ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು- ವೀರೇಂದ್ರ ಸೆಹ್ವಾಗ್