ಕರ್ನಾಟಕ

karnataka

ETV Bharat / sports

Ashes 2023: ಆಸ್ಟ್ರೇಲಿಯಾಕ್ಕೆ ಕವಾಜಾ ಶತಕದ ನೆರವು.. 7 ರನ್​ ಹಿನ್ನಡೆಯಿಂದ ಅನುಭವಿಸಿದ ಕಾಂಗರೂ ಪಡೆ - ETV Bharath Kannada news

ಆ್ಯಶಸ್​ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 386 ರನ್​ಗೆ ಸರ್ವಪತನ ಕಂಡಿದೆ. ಇದರಿಂದ 7 ರನ್​ನ ಮುನ್ನಡೆಯ ಜೊತೆಗೆ ಇಂಗ್ಲೆಂಡ್​ ಇನ್ನಿಂಗ್ಸ್​ ಆರಂಭಿಸಿದೆ.

Ashes 2023
ಆಸ್ಟ್ರೇಲಿಯಾಕ್ಕೆ ಕವಾಜಾ ಶತಕದ ನೆರವು

By

Published : Jun 18, 2023, 7:57 PM IST

ಲಂಡನ್​: ಆ್ಯಶಸ್ ಸರಣಿಯ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಉಸ್ಮಾನ್​ ಖವಾಜಾ ಅವರ 141 ರನ್​, ಹೆಡ್​ ಮತ್ತು ಅಲೆಕ್ಸ್​ ಕ್ಯಾರಿ ಅವರ ಅರ್ಧಶತಕದ ನೆರವಿನಿಂದ 386 ರನ್​ ಗಳಿಸಿ ಆಲ್​ಔಟ್​ ಆಗಿದೆ. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 8 ನಷ್ಟಕ್ಕೆ 393 ರನ್ ಗಳಿಸಿ ಡಿಕ್ಲೇರ್​ ಘೋಷಣೆ ಮಾಡಿತ್ತು. 7 ರನ್​ ಮುನ್ನಡೆಯೊಂದಿಗೆ ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ. ಮಳೆಯ ಕಾರಣ ಇನ್ನಿಂಗ್ಸ್​ ಬ್ರೇಕ್​ ಕೊಡಲಾಗಿದ್ದು, ಆಂಗ್ಲರ ಆರಂಭಿಕರಾದ ಬೆನ್​ ಡಕ್ಕೆಟ್​ ಮತ್ತು ಕ್ರಾಲಿ ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್​ 6.5 ಓವರ್​ನಲ್ಲಿ 26 ರನ್​ ಗಳಿಸಿದೆ.

ಟಾಸ್​ ಗೆದ್ದು ಇಂಗ್ಲೆಂಡ್​ ಬ್ಯಾಟಿಂಗ್​ ಮಾಡಿ 393 ರನ್ ಗಳಿಸಿ ಮೊದಲ ದಿನವೇ ಡಿಕ್ಲೇರ್​ ಘೋಷಿಸಿತ್ತು. ಇಂಗ್ಲೆಂಡ್​ ಪರ ಜೋ ರೂಟ್​ 118 ರನ್​ ದೊಡ್ಡ ಇನ್ನಿಂಗ್ಸ್​ ಕಟ್ಟಿದ್ದರು. ಅವನ್ನು ಬಿಟ್ಟರೆ ಜಾನಿ ಬೆರ್​ಸ್ಟೋವ್​ 78 ಮತ್ತು ಝಾಕ್ ಕ್ರಾಲಿ 61 ರನ್ ಗಳಿಸಿದ್ದರು. ಏಕದಿನ ಮಾದರಿಯಲ್ಲಿ ಬ್ಯಾಟ್​ ಬೀಸಿದ್ದ ಇಂಗ್ಲೆಂಡ್​ ತಂಡ ಮೊದಲ ದಿನವೇ 400ಕ್ಕೆ 7 ರನ್​ ಕಡಿಮೆ ಗಳಿಸಿ ಡಿಕ್ಲೇರ್​ ಹೇಳಿತ್ತು.

ಮೊದಲ ದಿನದ ಕೊಮೆಯಲ್ಲಿ 4 ಓವರ್​ಗಳ ಪ್ರಥಮ ಇನ್ನಿಂಗ್ಸ್​ ಆಸ್ಟ್ರೇಲಿಯಾ ಆರಂಭಿಸಿತು ಅಂದು ವಿಕೆಟ್​ ಕಳೆದುಕೊಂಡಿರಲಿಲ್ಲ. ಆದರೆ ಎರಡನೇ ದಿನದ ಆರಂಭದಲ್ಲಿ ಬ್ರಾಡ್​ ವಾರ್ನರ್​ (9) ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಮಾರ್ನಸ್​ ಲಬುಶೇನ್​ ಶೂನ್ಯಕ್ಕೆ ಔಟ್​ ಆದರು. ಆದರೆ ಆಸಿಸ್​ನ ಇನ್ನೋರ್ವ ಆರಂಭಿಕ ಆಟಗಾರ ಉಸ್ಮಾನ್​ ಖವಾಜಾ ಏಕಾಂಗಿಯಾಗಿ ಇನ್ನಿಂಗ್ಸ್​ ಕಟ್ಟಿದರು.

ಸ್ಮಿತ್​ ಸಹ ಇಂಗ್ಲೆಂಡ್​ ಪಿಚ್​ನಲ್ಲಿ ಬಲಿಷ್ಠವಾಗಿ ನಿಲ್ಲಲಿಲ್ಲ. 59 ಬಾಲ್​ ಎದುರಿಸಿ 16 ರನ್​ ವಿಕೆಟ್​ ಕೊಟ್ಟರು. ನಂತರ ಟ್ರಾವೆಸ್​ ಹೆಡ್​ ಖವಾಜಾ ಜೊತೆಗೂಡಿ ರನ್​ ಕಲೆ ಹಾಕಿದರು. ಹೆಡ್​ ತಮ್ಮ ಅರ್ಧಶತಕವನ್ನು ಮಾಡಿಕೊಂಡು ಇನ್ನಿಂಗ್ಸ್​ ಮುಕ್ತಾಯ ಮಾಡಿದರು. ನಂತರ ಬಂದ ಗ್ರೀನ್​ ಹೆಚ್ಚು ಹೊತ್ತು ಆಡಲಿಲ್ಲ. ನಂತರ ಬಂದ ಅಲೆಕ್ಸ್​ ಕ್ಯಾರಿ ಖವಾಜಾ ಜೊತೆಗೆ ಉತ್ತಮ ಜೊತೆಯಾಟ ಆಡಿದರು. ಎರಡನೇ ದಿನದ ಅಂತ್ಯಕ್ಕ ಆಸ್ಟ್ರೇಲಿಯಾ 5 ವಿಕೆಟ್​ ನಷ್ಟಕ್ಕೆ 311 ರನ್ ಗಳಿಸಿತ್ತು. ಕ್ರೀಸ್​ನಲ್ಲಿ ಶತಕ ಗಳಿಸಿದ (126) ಉಸ್ಮಾನ್​ ಖವಾಜಾ ಮತ್ತು ಅರ್ಧಶತಕ ಗಳಿಸಿದ (52) ಅಲೆಕ್ಸ್​ ಕ್ಯಾರಿ ಇದ್ದರು.

ಮೂರನೇ ದಿನವಾದ ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ಕ್ಯಾರಿ ವಿಕೆಟ್​ನ್ನು ಜೇಮ್ಸ್​ ಆಂಡರ್ಸನ್​ ಪಡೆದರು. ನಂತರ ನಾಯಕ ಪ್ಯಾಟ್​ ಕಮಿನ್ಸ್​ ಬಂದು ಖವಾಜಾ ಜೊತೆ ಇನ್ನಿಂಗ್ಸ್​ ಕಟ್ಟಿದರು. ಖವಾಜಾ ವಿಕೆಟ್​ಗಾಗಿ ಬೆನ್ ಸ್ಟೋಕ್ಸ್ ವಿಭಿನ್ನ ರೀತಿಯ ಫೀಲ್ಡಿಂಗ್​ ಸೆಟ್​ ಮಾಡಿ ವಿಕೆಟ್​ ತೆಗೆದರು. 321 ಬಾಲ್​ ಆಡಿದ ಕವಾಜಾ 14 ಬೌಂಡರಿ ಮತ್ತು 3 ಸಿಕ್ಸ್​ನಿಂದ 141 ಗಳಿಸಿ ವಿಕೆಟ್​ ಕೊಟ್ಟರು.

ನಂತರ ಬಾಲಂಗೋಚಿಗಳಾದ ಲಿಯಾನ್​ ಮತ್ತು ಬೋಲ್ಯಾಂಡ್​ ಬೇಗ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ 38 ರನ್​ ಗಳಿಸಿದ್ದ ನಾಯಕ ಕಮಿನ್ಸ್​ ಸಹ ವಿಕೆಟ್​ ಕೊಟ್ಟರು. ಇದರಿಂದ ಆಸಿಸ್​ 386ಕ್ಕೆ ಆಲ್​ ಔಟ್​ ಆಯಿತು. ನಿವೃತ್ತಿಯ ನಂತರ ಇಂಗ್ಲೆಂಡ್ ತಂಡ ಸೇರಿದ ಮೋಯಿನ್​ ಅಲಿ 2 ವಿಕೆಟ್​ ಪಡೆದರೆ, ಬ್ರಾಡ್​ ಮತ್ತು ರಾಬಿನ್​ಸನ್​ ತಲಾ 3 ವಿಕೆಟ್​ ಪಡೆದು ಮಿಂಚಿದರು. ​

ಇದನ್ನೂ ಓದಿ:Ashes 2023: ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್​ ಅಲಿ.. ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಿದ ಐಸಿಸಿ

ABOUT THE AUTHOR

...view details