ಕರ್ನಾಟಕ

karnataka

ETV Bharat / sports

Ashes 2023: 49 ರನ್​ನಿಂದ ಆಸ್ಟ್ರೇಲಿಯಾ ಮಣಿಸಿದ ಆಂಗ್ಲರು.. ಆ್ಯಶಸ್​ ಸರಣಿಯಲ್ಲಿ ಸಮಬಲ ಸಾಧಿಸಿದ ಇಂಗ್ಲೆಂಡ್​

ಐದನೇ ಮತ್ತು ಅಂತಿಮ ಆ್ಯಶಸ್​ ಟೆಸ್ಟ್​ನ್ನು ಗೆದ್ದ ಇಂಗ್ಲೆಂಡ್​ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ​

ಆ್ಯಶಸ್​ ಟೆಸ್ಟ್
Ashes 2023

By

Published : Aug 1, 2023, 1:37 PM IST

ಲಂಡನ್: ಕ್ರಿಕೆಟ್​​ ವೃತ್ತಿಜೀವನದ ಅಂತಿಮ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ವೇಗಿ ಸ್ಟುವರ್ಟ್ ಬ್ರಾಡ್ ಎರಡು ವಿಕೆಟ್​ಗಳನ್ನು ಪಡೆದು ದಾಖಲೆ ನಿರ್ಮಿಸಿದರೆ, ಅತ್ತ ಆ್ಯಶಸ್ ಐದನೇ ಪಂದ್ಯವನ್ನು ಇಂಗ್ಲೆಂಡ್ 49 ರನ್​ನಿಂದ ಗೆದ್ದು ಸರಣಿ ಸಮಬಲ ಸಾಧಿಸಿದ ತೃಪ್ತಿಯನ್ನು ಪಡೆದುಕೊಂಡಿತು.

ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 135 ರನ್‌ ಗಳಿಸಿತ್ತು. ಐದನೇ ದಿನದ ಆಟ ಮಳೆಯಿಂದಾಗಿ ಕೊಂಚ ತಡವಾಗಿ ಆರಂಭವಾದರೂ ಆಸಿಸ್​ ಆಟಗಾರರು ಉತ್ತಮ ಲಯದಲ್ಲಿ ಬ್ಯಾಟ್​ ಬೀಸಿದರು. ಆರಂಭಿಕರು 140 ರನ್​ ಜೊತೆಯಾಟಮಾಡುತ್ತಿದ್ದಾಗ ಇಂಗ್ಲೆಂಡ್​ ನೂತನ ಬಾಲ್​ ಪ್ರಯೋಗಿಸಿ ಮೂರು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಯಿತು.

ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಮಳೆ ಬರುವ ಮೊದಲು ಆಸ್ಟ್ರೇಲಿಯಾದ ಚೇತರಿಕೆಗೆ ಕಾರಣರಾದರು. ಎರಡು ಗಂಟೆಗಳ ಮಳೆ ವಿರಾಮದ ನಂತರ, ಕ್ರಿಸ್ ವೋಕ್ಸ್ ಮತ್ತು ಮೊಯಿನ್ ಅಲಿ ಆಸ್ಟ್ರೇಲಿಯಾಕ್ಕೆ ಮುಳುವಾದರು. ಮಧ್ಯಮ ಕ್ರಮಾಂಕವನ್ನು ಔಟ್​ ಮಾಡಿದ್ದ ಇಂಗ್ಲೆಂಡ್​ಗೆ ಟಾಡ್ ಮರ್ಫಿ ಮತ್ತು ಅಲೆಕ್ಸ್ ಕ್ಯಾರಿ ಸ್ವಲ್ಪ ಸಮಯದವರೆಗೆ ನಿರಾಶೆಗೊಳಿಸಿದರು. ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ತಮ್ಮ ಕೊನೆಯ ಇನ್ನಿಂಗ್ಸ್​ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್​​ನ್ನು ಕಾಡುತ್ತಿದ್ದ ಟಾಡ್ ಮರ್ಫಿ ಮತ್ತು ಅಲೆಕ್ಸ್ ಕ್ಯಾರಿ ವಿಕೆಟ್​ ಪಡೆದು ಗೆಲುವಿಗೆ ಕಾರಣರಾದರು. ಇದರಿಂದ ಆಸ್ಟ್ರೇಲಿಯ 334 ರನ್‌ಗಳಿಗೆ ಆಲೌಟ್ ಆಯಿತು. ದಿ ಓವಲ್‌ನಲ್ಲಿ ಜಯಗಳಿಸುವ ಮೂಲಕ, ಆಸ್ಟ್ರೇಲಿಯವು ಈಗಾಗಲೇ ಆಶಸ್ ಅನ್ನು ಉಳಿಸಿಕೊಂಡಿದ್ದರೂ, ಇಂಗ್ಲೆಂಡ್ 2-2 ಅಂತರದ ನಂತರ ಸರಣಿ ಸಮಬಲಗೊಳಿಸಿಕೊಂಡಿತು.

ಐದನೇ ದಿನದಾಟ: ಆಸ್ಟ್ರೇಲಿಯಾ ಗೆಲುವಿಗೆ ಇನ್ನೂ 249 ರನ್‌ಗಳ ಅಗತ್ಯವಿದ್ದು, ಐದನೇ ದಿನದಾಟವನ್ನು ಅರ್ಧಶತಕ ದಾಟಿ ಆಡುತ್ತಿದ್ದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಮುಂದುವರೆಸಿದರು. ಆದರೆ, ಮಾರ್ಕ್ ವುಡ್ 37 ನೇ ಓವರ್‌ನ ಮೊದಲ ಎಸೆತದಲ್ಲಿ ಬೌನ್ಸರ್‌ನಿಂದ ಹೆಲ್ಮೆಟ್‌ನಲ್ಲಿ ಖವಾಜಾಗೆ ಹೊಡೆದ ನಂತರ ಚೆಂಡನ್ನು ಬದಲಿಸಲಾಯಿತು. ಇದು ಪಂದ್ಯದಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಯಿತು. ಪಂದ್ಯ ಕೈ ತಪ್ಪಿಹೋಗುವ ಸಾಧ್ಯತೆ ಇದೆ ಎಂಬಂತಿದ್ದ ಇಂಗ್ಲೆಂಡ್​​ಗೆ ಹೊಸ ಬಾಲ್​ನಿಂದ ಗೆಲುವಿನ ಭರವಸೆ ಮೂಡಿತು.

ಹೊಸ ಬಾಲ್​ನಲ್ಲಿ 60 ರನ್​ ಗಳಿಸಿ ಆಡುತ್ತಿದ್ದ ಬ್ಯಾಟರ್​ ವಾರ್ನರ್​ ವಿಕೆಟ್​ನ್ನು ಕ್ರಿಸ್​ ವೋಕ್ಸ್​​ ಕಿತ್ತರು. ಅವರ ಬೆನ್ನಲ್ಲೇ 72 ರನ್​ ಗಳಿಸಿದ್ದ ಉಸ್ಮಾನ್ ಖವಾಜಾ ಸಹ ವಿಕೆಟ್​ ಕೊಟ್ಟರು. ಮೂರನೇ ವಿಕೆಟ್​ ಆಗಿ ಬಂದಿದ್ದ ಲಬುಶೇನ್ 13 ರನ್​ಗೆ ವಿಕೆಟ್​ ಕೊಟ್ಟರು. ಇಂಗ್ಲೆಂಡ್​ ಬೌಲರ್​​ಗಳ ಕೈಗೆ ನೂತನ ಚೆಂಡು ಸಿಕ್ಕಿದ ನಂತರ 29 ರನ್​ ಗಳಿಸುವಷ್ಟರಲ್ಲಿ ಆಸಿಸ್​ 3 ವಿಕೆಟ್​ ಕಳೆದುಕೊಂಡಿತು. ಆದರೆ, ನಂತರ ನಾಲ್ಕು ಮತ್ತು ಐದನೇ ವಿಕೆಟ್​ನಲ್ಲಿ ಸ್ಮಿತ್ ಮತ್ತು ಹೆಡ್​ ಇಂಗ್ಲೆಂಡ್​ ಅನ್ನು ಕಾಡಿದರು.

ಆದರೆ, ಈ ಜೋಡಿಯ ಜೊತೆಯಾಟವನ್ನು ಮೋಯಿನ್​ ಅಲಿ ಬ್ರೇಕ್ ಮಾಡಿದರು. 43 ರನ್​ ಗಳಿಸಿ ಹೆಡ್​ ಔಟ್​ ಆದರೆ, 54 ರನ್​ ಗಳಿಸಿ ಸ್ಮಿತ್​ ಔಟ್​ ಆದರು. ನಂತರ ಆಸ್ಟ್ರೇಲಿಯಾದ ಕೆಳ ಹಂತ ವೇಗವಾಗಿ ಕುಸಿತ ಕಂಡಿತು. ಮಾರ್ಷ್​​, ಸ್ಟಾರ್ಕ್​ ಮತ್ತು ಕಮಿನ್ಸ್ ಬೇಗ ವಿಕೆಟ್​ ಕೊಟ್ಟರು. ಕೊನೆಯಲ್ಲಿ ಇಂಗ್ಲೆಂಡ್​ನ್ನು ಕಾಡಿದ್ದು ಟಾಡ್ ಮರ್ಫಿ ಮತ್ತು ಅಲೆಕ್ಸ್ ಕ್ಯಾರಿ. ಕೊನೆಯಲ್ಲಿ ಈ ಇಬ್ಬರ ವಿಕೆಟ್​ನ್ನು ಬ್ರಾಡ್​ ಪಡೆದ ಕಾರಣ ಆಂಗ್ಲರ ಪಡೆ ಜಯ ಬರೆಯಿತು.

ಇಂಗ್ಲೆಂಡ್​ ಪರ ವೋಕ್ಸ್​ 4, ಅಲಿ 3, ಬ್ರಾಡ್​​ 2 ಮತ್ತು ವುಡ್​​​ 1 ವಿಕೆಟ್​ ಪಡೆದರು. ಪಂದ್ಯದಲ್ಲಿ ಒಟ್ಟು ಎರಡು ಇನ್ನಿಂಗ್ಸ್​​ನಿಂದ 7 ವಿಕೆಟ್​​​ ಪಡೆದಿದ್ದಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕ್ರಿಸ್​ ವೋಕ್ಸ್ ಪಡೆದರು. ಆ್ಯಶಸ್​ ಸರಣಿ ಉದ್ದಕ್ಕೂ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದಕ್ಕಾಗಿ ಕ್ರಿಸ್​ ವೋಕ್ಸ್ ಮತ್ತು ಮಿಚೆಲ್​ ಸ್ಟಾರ್ಕ್​ಗೆ​ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಂಟಿಯಾಗಿ​ ನೀಡಲಾಯಿತು.

ಇದನ್ನೂ ಓದಿ:ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಕಮ್​​ಬ್ಯಾಕ್​... ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕನ ಪಟ್ಟ

ABOUT THE AUTHOR

...view details