ಲಾರ್ಡ್ಸ್ (ಲಂಡನ್): ಆ್ಯಶಸ್ ಸರಣಿ 2023ರ ಲಾರ್ಡ್ಸ್ ಟೆಸ್ಟ್ ರೋಚಕ ಹಂತ ತಲುಪಿದೆ. ಕೊನೆಯ ದಿನವಾದ ಇಂದು ಉಭಯ ತಂಡಗಳಿಗೂ ಗೆಲುವಿನ ಅವಕಾಶ ಇದೆ. ಆ್ಯಶಸ್ನ ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಎರಡನೇ ಗೆಲುವಿಗೆ 6 ವಿಕೆಟ್ಗಳ ಅವಶ್ಯಕತೆ ಇದೆ. ಇಂಗ್ಲೆಂಡ್ಗೆ 257 ರನ್ ಅಗತ್ಯ ಇದ್ದು, 50 ರನ್ ಗಳಿಸಿದ ಬೆನ್ ಡಕೆಟ್ ಮತ್ತು 29 ರನ್ ಮಾಡಿ ನಾಯಕ ಬೆನ್ ಸ್ಟೋಕ್ಸ್ ಕ್ರೀಸ್ನಲ್ಲಿದ್ದಾರೆ.
ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 279ಕ್ಕೆ ಆಲ್ಔಟ್ ಆಯಿತು. 91 ರನ್ನ ಮುನ್ನಡೆಯಿಂದ ಕಾಂಗರೂ ಪಡೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ಗೆಲುವಿಗೆ 371 ರನ್ನ ಗುರಿ ನೀಡಿತು. ನಾಲ್ಕನೇ ದಿನ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪರ ಬೆನ್ ಡಕೆಟ್ (ಔಟಾಗದೆ 50) ಮತ್ತು ನಾಯಕ ಬೆನ್ ಸ್ಟೋಕ್ಸ್ (ಔಟಾಗದೆ 29) 45/4ಕ್ಕೆ ಕುಸಿದ ನಂತರ ಐದನೇ ವಿಕೆಟ್‌ಗೆ ಮುರಿಯದ 69 ರನ್‌ಗಳ ಜೊತೆಯಾಟವನ್ನು ನಡೆಸಿ ಕ್ರೀಸ್ನಲ್ಲಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಎರಡನೇ ದಿನದ ಅಂತ್ಯಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು 278 ಗಳಿಸಿತ್ತು. ಮೂರನೇ ದಿನದಾಟ ಆರಂಭಿಸಿದಾಗ ಕೇಲವ 74 ರನ್ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲೂ ಇದೇ ರೀತಿ ವಿಕೆಟ್ ಕಳದುಕೊಂಡದಲ್ಲಿ ಪಂದ್ಯ ಗೆಲ್ಲುವುದು ಕಷ್ಟವಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯದಿಂದ ಹೊರಗಿದ್ದರೂ ವೇಗದ ಬೌಲಿಂಗ್ನಿಂದ ಇಂಗ್ಲೆಂಡ್ನ್ನು ಕಟ್ಟಿಹಾಕಿತ್ತು ಇಂದು ಅದೇ ಭರವಸೆಯಲ್ಲಿ ಮೈದಾನಕ್ಕಿಳಿಯಲಿದೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮಿಚೆಲ್ ಸ್ಟಾರ್ಕ್: ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಚೆಲ್ ಜಾನ್ಸನ್ ಅವರ ವಿಕೆಟ್‌ಗಳ್ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಹಿಂದಿಕ್ಕಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಕೇವಲ 79 ಪಂದ್ಯಗಳಲ್ಲಿ 315 ವಿಕೆಟ್‌ಗಳನ್ನು ಸ್ಟಾರ್ಕ್ ಪಡೆದಿದ್ದಾರೆ.