ಕೊಲಂಬೊ(ಶ್ರೀಲಂಕಾ): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ನಲ್ಲಿ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಇದರ ಮಧ್ಯೆ ಶಿಖರ್ ಧವನ್ ನೇತೃತ್ವದ ಯಂಗ್ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಪಂದ್ಯದಲ್ಲಿ ಭಾಗಿಯಾಗಲಿದೆ. ಇದೇ ವಿಚಾರವನ್ನಿಟ್ಟುಕೊಂಡು ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಇದೀಗ ಅಲ್ಲಿನ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶ್ರೀಲಂಕಾ ಮಾಜಿ ಕ್ಯಾಪ್ಟನ್ ರಣತುಂಗಾ ಭಾರತೀಯ ಕ್ರಿಕೆಟ್ ಮಂಡಳಿ ಎರಡನೇ ದರ್ಜೆಯ ಕ್ರಿಕೆಟ್ ತಂಡವನ್ನು ಶ್ರೀಲಂಕಾಗೆ ಕಳುಹಿಸಿ ಅವಮಾನ ಮಾಡಿದೆ ಎಂದು ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಅರ್ಜುನ್ ರಣತುಂಗಾ ಹೇಳಿದ್ದಾರೆ. 1996ರ ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಅರ್ಜುನ್ ರಣತುಂಗಾ ಅಲ್ಲಿನ ಕ್ರೀಡಾ ಸಚಿವರ ವಿರುದ್ಧ ಕೂಡ ಆಕ್ರೋಶ ಹೊರಹಾಕಿದ್ದು, ಭಾರತದಿಂದ ಕ್ರಿಕೆಟ್ ಆಡಲು ಇಲ್ಲಿಗೆ ಬಂದಿರುವ ತಂಡ ಬಲಿಷ್ಠವಾಗಿಲ್ಲ. ಅದು ಎರಡನೇ ದರ್ಜೆ ತಂಡವಾಗಿದೆ. ಇದರ ಬಗ್ಗೆ ನಮ್ಮ ಕ್ರೀಡಾ ಸಚಿವರು ಅಥವಾ ಕ್ರಿಕೆಟ್ ಮಂಡಳಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅಭ್ಯಾಸದಲ್ಲಿ ನಿರತರಾಗಿರುವ ಟೀಂ ಇಂಡಿಯಾ ಇದನ್ನೂ ಓದಿರಿ: ಬಂದೇ ಬಿಡ್ತು ಆಗಸದಲ್ಲಿ ಹಾರಾಡೋ ಕಾರು! ಇದು ಗಂಟೆಗೆ ಎಷ್ಟು ಕಿ.ಮೀ ಓಡುತ್ತೆ ಗೊತ್ತೇ?
ಶ್ರೀಲಂಕಾ ಐಸಿಸಿ ಶ್ರೇಯಾಂಕದಲ್ಲಿ ಕೆಳ ಮಟ್ಟದಲ್ಲಿರಬಹುದು. ಆದರೆ ಕ್ರಿಕೆಟ್ನಿಂದ ನಾವು ಗುರುತಿಸಿಕೊಂಡಿದ್ದೇವೆ. ಈ ರೀತಿಯಾಗಿ ನಡೆದುಕೊಂಡಿರುವ ಭಾರತದ 'B team' ಜೊತೆ ನಾವು ಕ್ರಿಕೆಟ್ ಆಡಬಾರದು ಎಂದು ಹೇಳಿದ್ದಾರೆ. ಜತೆಗೆ ಇದು ಶ್ರೀಲಂಕಾ ಕ್ರಿಕೆಟ್ಗೆ ಮಾಡಿರುವ ಅವಮಾನ ಎಂದಿದ್ದಾರೆ. 1996ರ ಸಮಯದಲ್ಲಿ ಶ್ರೀಲಂಕಾ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ರಣತುಂಗಾ ತಂಡದ ಕ್ಯಾಪ್ಟನ್ ಆಗಿದ್ದರು. ಶಿಖರ್ ಧವನ್ ನೇತೃತ್ವದ ಯಂಗ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದು, ಮುಂದಿನ ತಿಂಗಳಿಂದ ಲಂಕಾ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದರಲ್ಲಿ ಹೆಚ್ಚಾಗಿ ಯುವ ಪಡೆ ಇದೆ. ಟೀಂ ಇಂಡಿಯಾದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ.
ಕೋಚ್ ದ್ರಾವಿಡ್ ಜೊತೆ ಶಿಖರ್ ಧವನ್ ಸದ್ಯ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಪಂದ್ಯಗಳನ್ನಾಡುತ್ತಿದ್ದು, ಟಿ-20 ಸರಣಿ ಸೋತಿರುವ ತಂಡ ಈಗಾಗಲೇ ಆಡಿರುವ ಎರಡು ಏಕದಿನ ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದೆ.