ಕರ್ನಾಟಕ

karnataka

ETV Bharat / sports

ಜೋಫ್ರಾ ಆರ್ಚರ್​ಗೆ ಮತ್ತೆ ಕಾಣಿಸಿಕೊಂಡ ಮೊಣಕೈ ನೋವು... ಕಿವೀಸ್​ ವಿರುದ್ಧದ ಸರಣಿಗೆ ಡೌಟ್​!

26 ವರ್ಷದ ವೇಗಿ ಭಾರತದ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಹಳೆಯ ನೋವು ಕಾಣಿಸಿಕೊಂಡ ಹಿನ್ನೆಲೆ ಕೊನೆಯ 2 ಪಂದ್ಯಗಳಿಂದ ಹೊರ ಬಿದ್ದಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು, ಐಪಿಎಲ್​ನಿಂದಲೂ ಹೊರ ಉಳಿದಿದ್ದರು.

ಜೋಫ್ರಾ ಆರ್ಚರ್​
ಜೋಫ್ರಾ ಆರ್ಚರ್​

By

Published : May 16, 2021, 3:16 PM IST

ಲಂಡನ್: ಗಾಯದಿಂದ ಚೇತರಿಸಿಕೊಂಡು ಕೌಂಟಿ ಕ್ರಿಕೆಟ್​ನಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡದ ವೇಗದ ಬೌಲರ್​ ಜೋಫ್ರಾ ಆರ್ಚರ್​ಗೆ ಮತ್ತೊತ್ತೆ ಮೊಣಕೈ ನೋವು ಕಾನಿಸಿಕೊಂಡಿದ್ದು, ಜೂನ್​ ಮೊದಲ ವಾರದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಸಸೆಕ್ಸ್​ ಪರ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಕೆಂಟ್​ ವಿರುದ್ಧ ಆಡುವಾಗ ದೀರ್ಘಕಾಲ ಕಾಡಿದ್ದ ಮೊಣಕೈ ನೋವು ಮತ್ತೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

26 ವರ್ಷದ ವೇಗಿ ಭಾರತದ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಹಳೆಯ ನೋವು ಕಾಣಿಸಿಕೊಂಡ ಹಿನ್ನೆಲೆ ಕೊನೆಯ 2 ಪಂದ್ಯಗಳಿಂದ ಹೊರ ಬಿದ್ದಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್​ನಿಂದಲೂ ಹೊರ ಉಳಿದಿದ್ದರು.

ಆರ್ಚರ್​ ಕೌಂಟಿ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 29 ರನ್‌ಗಳಿಗೆ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 5 ಓವರ್ ಮಾತ್ರ ಬೌಲಿಂಗ್ ಮಾಡಿ, ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ಜೋಫ್ರಾ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ನಾಯಕನಿಗೆ ಮತ್ತು ತಂಡಕ್ಕೆ ನಿರಾಶೆಯಾಗುತ್ತದೆ. ಆದರೆ ಕ್ರೀಡೆಯಲ್ಲಿ ಇದು ಸಂಭವಿಸುತ್ತದೆ. ಕ್ರೀಡೆಗಳಲ್ಲಿ ಜನರು ಅದನ್ನು ಅನುಭವಿಸಲೇಬೇಕು. ಅದೇ ಜೀವನ, ಅದೇ ಕ್ರೀಡೆ. ಸದ್ಯಕ್ಕೆ ಅವರು ಹೊರಗುಳಿಯಲು ಸಿದ್ಧರಿದ್ದು, ಸಸೆಕ್ಸ್​ ಗೆಲ್ಲಬೇಕೆಂದು ಬಯಸುತ್ತಿದ್ದಾರೆ. ಈ ಪಂದ್ಯದಲ್ಲಿ ಆಡಲು ಅವರಿಗೆ ಇಸಿಬಿ ಅನುಮತಿ ನೀಡಬೇಕಿತ್ತು. ಏಕೆಂದರೆ ಅವರು ನಮ್ಮ ಆಟಗಾರರಲ್ಲ. ಇಸಿಬಿ ಅನುಮತಿ ನೀಡಿದರೆ ಅವರು ಮುಂದುವರಿಯಲಿದ್ದಾರೆ ಎಂದು ಸಸೆಕ್ಸ್ ಕೋಚ್​ ಇಯಾನ್ ಸಾಲಿಸ್‌ಬರಿ ತಿಳಿಸಿದ್ದಾರೆ.

ಇದನ್ನು ಓದಿ:ನಾನು ಮೊದಲಿಗಿಂತ ಪ್ರತಿದಿನ ಬಲಿಷ್ಠನಾಗುತ್ತಿದ್ದೇನೆ: ಕ್ರಿಕೆಟಿಗ ಟಿ.ನಟರಾಜನ್

ABOUT THE AUTHOR

...view details