ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮುಂಬರುವ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಆಗಿದ್ದು, ಅನುಷ್ಕಾ ಶರ್ಮಾ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅನುಷ್ಕಾ ಶರ್ಮಾ ಅವರು ಮಹಿಳಾ ಟೀಂ ಇಂಡಿಯಾದ ಜೆರ್ಸಿ ಧರಿಸಿದ್ದು ಕಂಡು ಬಂದಿತು. ವುಮೆನ್ಸ್ ಕ್ರಿಕ್ ಝೋನ್ ಟ್ವಿಟರ್ ಖಾತೆಯಲ್ಲಿ ಮೈದಾನದಲ್ಲಿ ಓಡಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಟೀಂ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್ ಮೈದಾನಕ್ಕಿಳಿದ ಅನುಷ್ಕಾ ಶರ್ಮಾ - Anushka Sharma New Movie
ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದ ಚಿತ್ರೀಕರಣದ ನಿಮಿತ್ತ ನಟಿ ಅನುಷ್ಕಾ ಶರ್ಮಾ ಅವರು ಕೋಲ್ಕತ್ತಾದ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು.
Anushka Sharma Is in Chakdaha Express shooting
ಚಿತ್ರವನ್ನು ಪ್ರಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದು, ನೆಟ್‍ಫ್ಲಿಕ್ಸ್‍ನಲ್ಲಿ ಫೆಬ್ರವರಿ 2, 2023 ರಂದು ಬಿಡುಗಡೆಯಾಗಲಿದೆ. ಶಾರುಖ್ ಖಾನ್ ನಟನೆಯ ಝೀರೋ ಚಿತ್ರವೇ ಇವರು ಕಾಣಿಸಿಕೊಂಡಿದ್ದು, ಕೊನೆಯ ಚಿತ್ರವಾಗಿತ್ತು. ನಾಲ್ಕು ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಾಯಿಯಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಬಂಗಾಳದಲ್ಲಿ ರಾಜಕೀಯ ಪಕ್ಷಗಳ ದಾಳವಾದ ಗಂಗೂಲಿ - ಬಿಸಿಸಿಐ ವಿಚಾರ