ಭಾರತ ಮತ್ತು ಪಾಕಿಸ್ತಾನ ನಡುವಣ ಭಾನುವಾರದ ಮುಖಾಮುಖಿಯು 2022ರ ಟಿ20 ವಿಶ್ವಕಪ್ನ ಕ್ರಿಕೆಟ್ ಟೂರ್ನಿಯ ಅಮೋಘ ಪಂದ್ಯವಾಗಿ ಹೊರಹೊಮ್ಮಿದೆ. ಕೊನೆಯ ಎಸೆತದಲ್ಲಿ ಗೆಲುವು ಕಂಡ ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಅಜೇಯ 82 ರನ್ ಮೂಲಕ ಜಯದ ರೂವಾರಿ ಎನಿಸಿದರು.
ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೊಹ್ಲಿ ಬ್ಯಾಟ್ನಿಂದ ಮೂಡಿಬಂದ ಅತ್ಯಂತ ಸ್ಮರಣೀಯ ಪ್ರದರ್ಶನಗಳಲ್ಲೊಂದಾಗಿದೆ. ಕೊಹ್ಲಿ ಆಟದ ಬಗ್ಗೆ ಕ್ರಿಕೆಟ್ ದಿಗ್ಗಜರು ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದು, ಅವರ ಪತ್ನಿ ಅನುಷ್ಕಾ ಶರ್ಮಾ ಐಕಾನಿಕ್ ಬ್ಯಾಟರ್ ಕೊಂಡಾಡುತ್ತ ಸುಂದರ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
''ನೀವು ಸುಂದರ!! ನೀವು ಅದ್ಭುತ ಸೌಂದರ್ಯ!! ನೀವು ಇಂದು ರಾತ್ರಿ ಜನರ ಜೀವನದಲ್ಲಿ ಬಹಳ ಸಂತೋಷ ತಂದಿದ್ದೀರಿ ಮತ್ತು ಅದು ಕೂಡ ದೀಪಾವಳಿಯ ಮುನ್ನಾದಿನದಂದು! ನೀವು ನನ್ನ ಪ್ರೀತಿಯ ಅದ್ಭುತ ವ್ಯಕ್ತಿ. ನಿಮ್ಮ ಶ್ರದ್ಧೆ, ಸಂಕಲ್ಪ ಮತ್ತು ನಂಬಿಕೆ ನನ್ನ ಮನಸ್ಸಿಗೆ ಮುದ ನೀಡುತ್ತದೆ!! ನಾನು ಹೇಳಬಹುದಾದ ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಈಗಷ್ಟೇ ನೋಡಿದ್ದೇನೆ ಮತ್ತು ತುಂಬಾ ಚಿಕ್ಕವಳಾದ ನಮ್ಮ ಮಗಳಿಗೆ ಅವಳ ತಾಯಿ ಏಕೆ ಕುಣಿದಾಡುತ್ತಿದ್ದಾಳೆ, ಏಕೆ ಹುಚ್ಚುಚ್ಚಾಗಿ ಕಿರುಚುತ್ತಿದ್ದಾಳೆ ಎಂದು ಈಗ ಅರ್ಥವಾಗುವುದಿಲ್ಲ.
ಆದರೆ ಮುಂದೊಂದು ದಿನ ಅವಳ ತಂದೆ ಆ ದಿನ ರಾತ್ರಿ ತನ್ನ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ನನ್ನಪ್ಪ ಕಠಿಣ ದಿನಗಳಿಂದ ಹಿಂದೆಂದಿಗಿಂತಲೂ ಬಲಶಾಲಿಯಾಗಿ ಮತ್ತು ಬುದ್ಧಿವಂತನಾಗಿ ಹೊರಬಂದಿದ್ದರು ಎಂಬುದು ಅರಿವಾಗಲಿದೆ. ನಿಮ್ಮ ಬಗ್ಗೆ ಬಹಳ ಹೆಮ್ಮೆಪಡುತಿದ್ದೇನೆ!! ನಿಮ್ಮ ಶಕ್ತಿ ಅದ್ಭುತ.. ನೀವು ನನ್ನ ಪ್ರೀತಿ, ಮಿತಿಯೇ ಇಲ್ಲ!! ನಿಮ್ಮನ್ನು ಎಂದೆಂದಿಗೂ, ಎಂತಹ ಸಂದಿಗ್ಧತೆಯಲ್ಲೂ ಪ್ರೀತಿಸುತ್ತೇನೆ'' ಎಂದು ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಎರಡು ದಿನ ಹದ್ದು ಹಾರದಿದ್ದರೆ ಆಕಾಶ ಪಾರಿವಾಳಕ್ಕೆ ಸೇರುವುದಿಲ್ಲ.. ಕೊಹ್ಲಿಗೆ ಪ್ರಶಂಸೆಗಳ ಮಹಾಪೂರ