ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ಗೂ ಮುನ್ನ ಭಾರತ ಆಡುವ ಹನ್ನೊಂದರ ಬಳದ ವಿಚಾರದಲ್ಲಿ ಎಲ್ಲಾ ಬಾಕ್ಸ್ಗಳನ್ನು ಭರ್ತಿ ಮಾಡಿಕೊಂಡಿದೆ. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುವುದರ ಜೊತೆಗೆ, ಭಾರತ ತಂಡ ವೀಕ್ ಅಂಕಗಳ ಕಡೆ ಕೆಲಸ ಮಾಡಿದ್ದು ಎಲ್ಲಾ ವಿಭಾಗದಲ್ಲೂ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿದೆ.
ವಿಶ್ವಕಪ್ಗೂ ಎರಡು ತಿಂಗಳ ಮೊದಲು ತಂಡದ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದರಿಂದ ತಂಡದ ಆಯ್ಕೆಯಲ್ಲಿ ಗೊಂದಲಗಳು ಹೆಚ್ಚಿದ್ದವು. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಕಮ್ಬ್ಯಾಕ್ ಮಾಡಿದೆ. ಮಧ್ಯಮ ಕ್ರಮಾಂಕದ ಜೊತೆಗೆ ಬೌಲಿಂಗ್ನಲ್ಲೂ ತಂಡದ ಆಟಗಾರರು ಮಿಂಚುತ್ತಿದ್ದಾರೆ. ತಂಡ ಪ್ರದರ್ಶನ ಬಗ್ಗೆ ಈಟಿವಿ ಭಾರತದ ಜೊತೆಗೆ ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಮಾತನಾಡಿದ್ದಾರೆ.
"ಭಾರತ ಈ ಮೊದಲು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಬೌಲಿಂಗ್ನಲ್ಲಿ ಹೊಂದಿತ್ತು ಎಂಬುದು ನನಗೆ ನನಪಿಲ್ಲ. ಭಾರತ ಸಧ್ಯ ನಾಲ್ಕು ಸ್ಟಾರ್ ವೇಗದ ಬೌಲರ್ಗಳನ್ನು ಹೊಂದಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ವೇಗದ ವಿಭಾಗದಲ್ಲಿ ಕೈಬಿಡಲು ಸಾಧ್ಯವಿಲ್ಲದ ಆಟಗಾರರಾಗಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗಿ ಆಗಿ ಕ್ಯಾಪ್ ತೊಟ್ಟಿದ್ದಾರೆ. ಹೀಗಿರುವಾಗ ತಂಡದಲ್ಲಿ ಮೂರು ವೇಗಿಗಳಲ್ಲಿ ಒಬ್ಬರನ್ನು ಕೈಬಿಡುವುದು ಕಷ್ಟವಾಗುತ್ತದೆ" ಎಂದು ಅಂಶುಮಾನ್ ಗಾಯಕ್ವಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಸ್ಪಿನ್ ಪಿಚ್ನಲ್ಲೂ ಮೂವರು ಪ್ರಮುಖ ವೇಗಿಗಳಿಗೆ ಅಂಶುಮಾನ್ ಗಾಯಕ್ವಾಡ್ ಒತ್ತುಕೊಡುವುದಾಗಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯರನ್ನು ಒಳಗೊಂಡಂತೆ ತಂಡದಲ್ಲಿ ಮೂವರು ವೇಗಿಗಳು ಕಾರ್ಯ ನಿರ್ವಹಿಸಬೇಕು ಎಂಬುದು ಅವರ ವಾದವಾಗಿದೆ. ತಂಡದಲ್ಲಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸುವ ಉದ್ದೇಶದಿಂದ ಶಮಿಗೆ ಕೋಕ್ ಕೊಟ್ಟು ಶಾರ್ದೂಲ್ ಠಾಕೂರ್ ಅವರನ್ನು ಆಡಿಸಲಾಯಿತು. ಆದರೆ ವಿಶ್ವಕಪ್ನಲ್ಲಿ ಮೂವರು ವೇಗಿಗಳನ್ನು ಆಡಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯವನ್ನು ಹೊರತುಪಡಿಸಿ ಮೂವರು ವೇಗದ ಬೌಲರ್ಗಳನ್ನು ತಂಡದಲ್ಲಿ ಆಡಿಸುವ ಬಗ್ಗೆ ಯಾವುದೇ ಅನುಮಾನ ಇಲ್ಲ. ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆಯಿಲ್ಲ.. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಆಡಿಸಬೇಕು" ಎಂದರು.