ಕರ್ನಾಟಕ

karnataka

ETV Bharat / sports

ಕ್ರಿಕೆಟ್​ನ ಹೊಸ ಮಾದರಿ 'THE 100'ಗೆ ಇಂದಿನಿಂದ ಚಾಲನೆ: ಲೀಗ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. - ಇಂದಿನಿಂದ ಹಂಡ್ರೆಡ್ ಲೀಗ್ ಆರಂಭ

ಕ್ರಿಕೆಟ್​ನಲ್ಲಿ ಇತರೆ ಕ್ರೀಡೆಗಳಂತೆ ಲಿಂಗಸಮಾನತೆಗೆ ಆದ್ಯತೆ ನೀಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದರಿಂದ ನಾವು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕಾಗಿದ್ದು, ಮಹಿಳಾ ಕ್ರಿಕೆಟರ್​ಗಳನ್ನು ಗುರುತಿಸಬಹುದಾಗಿದೆ. ಜೊತೆಗೆ ಅವರೆಲ್ಲರೂ 'ದಿ ಹಂಡ್ರೆಡ್' ತುಂಬಾ ಮೌಲ್ಯ ತಂದುಕೊಡಲಿದ್ದಾರೆ ಎಂದು​ ಮಹಿಳಾ ಟೂರ್ನಮೆಂಟ್​ ಮುಖ್ಯಸ್ಥೆ ಬ್ಯಾರೆಟ್​ ವಿಲ್ಡ್​ ಅಭಿಪ್ರಾಯವಾಗಿದೆ.

ದಿ ಹಂಡ್ರೆಡ್​ ಲೀಗ್ ಆರಂಭ
ದಿ ಹಂಡ್ರೆಡ್​ ಲೀಗ್ ಆರಂಭ

By

Published : Jul 21, 2021, 8:25 PM IST

ಲಂಡನ್​:ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್ ಆಯೋಜಿಸುತ್ತಿರುವ ಬಹುನಿರೀಕ್ಷಿತ 100 ಎಸೆತಗಳ ಟೂರ್ನಿಯಾದ 'ದಿ ಹಂಡ್ರೆಡ್​' ಲೀಗ್​ ಇಂದಿನಿಂದ ಆರಂಭವಾಗುತ್ತಿದೆ. ಇಂದು ಮಹಿಳೆಯರ ಟೂರ್ನಿ ಆರಂಭವಾದರೆ, ಗುರುವಾರದಿಂದ ಪುರುಷರ ಲೀಗ್ ಆರಂಭವಾಗಲಿದೆ.

ಈ ಟೂರ್ನಿಯ ವಿಶೇಷತೆಯೆಂದರೆ ಕ್ರಿಕೆಟ್ ಇತಿಹಾಸದಲ್ಲಿ ಖಾಸಗಿ ಲೀಗ್​ನಲ್ಲಿ ವಿಜೇತರಾಗುವ ಮಹಿಳಾ ಮತ್ತು ಪುರುಷರ ತಂಡಗಳಿಗೆ ಸಮಾನ ಬಹುಮಾನ ನೀಡಲು ಇಸಿಬಿ ನಿರ್ಧರಿಸಿದೆ.

ಕ್ರಿಕೆಟ್​ನಲ್ಲಿ ಇತರೆ ಕ್ರೀಡೆಗಳಂತೆ ಲಿಂಗಸಮಾನತೆಗೆ ಆದ್ಯತೆ ನೀಡಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ಇದೆ. ಇದರಿಂದ ನಾವು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕಾಗಿದ್ದು, ಮಹಿಳಾ ಕ್ರಿಕೆಟರ್​ಗಳನ್ನು ಗುರುತಿಸಬಹುದಾಗಿದೆ. ಜೊತೆಗೆ ಅವರೆಲ್ಲರೂ 'ದಿ ಹಂಡ್ರೆಡ್' ತುಂಬಾ ಮೌಲ್ಯ ತಂದುಕೊಡಲಿದ್ದಾರೆ ಎಂದು​ ಮಹಿಳಾ ಟೂರ್ನಮೆಂಟ್​ ಮುಖ್ಯಸ್ಥೆ ಬ್ಯಾರೆಟ್​ ವಿಲ್ಡ್​ ಅಭಿಪ್ರಾಯವಾಗಿದೆ.

ಟೂರ್ನಿಯ ಪ್ರಮುಖ ಅಂಶಗಳು..

  • 5 ವಾರಗಳ ಕಾಲ ನಡೆಯುವ ಈ ಟೂರ್ನಮೆಂಟ್​ನಲ್ಲಿ ಇಂಗ್ಲೆಂಡ್​ನ 8 ಪ್ರಮುಖ 8 ನಗರಗಳು ಭಾಗವಹಿಸಲಿವೆ. ಒಟ್ಟಾರೆಯಾಗಿ ಲೀಗ್‌ನಲ್ಲಿ 32 ಪಂದ್ಯಗಳು ನಡೆಯಲಿವೆ. ಅದರಂತೆ ತಂಡವೊಂದಕ್ಕೆ 8 ಪಂದ್ಯಗಳು ಇರಲಿದ್ದು, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ತವರು ಕ್ರೀಡಾಂಗಣದಲ್ಲಿ ​​ಉಳಿದ ನಾಲ್ಕು ಪಂದ್ಯಗಳನ್ನು ಎದುರಾಳಿ ಕ್ರೀಡಾಂಗಣದಲ್ಲಿ ಆಡಲಿದೆ.
  • ದಿ ಹಂಡ್ರೆಡ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.
  • ಪ್ರತಿ ಇನ್ನಿಂಗ್ಸ್​ನಲ್ಲಿ 100 ಎಸೆತಗಳು ಇರಲಿದ್ದು, ಮೊದಲ 25 ಎಸೆತಗಳಿಗೆ ಪವರ್​ ಪ್ಲೇ ಇರುತ್ತದೆ. ಒಬ್ಬ ಬೌಲರ್​ ಸತತ 5 ಅಥವಾ 10 ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಪ್ರತಿಯೊಬ್ಬ ಬೌಲರ್​ ಹೆಚ್ಚೆಂದರೆ 20 ಎಸೆತಗಳನ್ನು ಎಸೆಯಬಹುದಾಗಿದೆ.
  • ಒಟ್ಟು 20 ಎಸೆತಗಳನ್ನು 2 ಬಾರಿ ಅಥವಾ 4 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇಲ್ಲಿ 6 ಎಸತಗಳ ಓವರ್​ ಬದಲಾಗಿ 5 ಎಸೆತಗಳಿರುತ್ತವೆ.
  • ಏಕದಿನ, ಟಿ20 ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ ಪ್ರತಿ ಓವರ್​ಗೆ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್​ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಬೇಕು.
  • ಪ್ರತಿ ಇನ್ನಿಂಗ್ಸ್​ಗೆ ಮೊದಲ 25 ಎಸೆತಗಳ ಪವರ್‌ಪ್ಲೇ ಇರುತ್ತದೆ. ಈ ವೇಳೆ 30 ಅಡಿ ಹೊರಗೆ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಅವಕಾಶ ಇರಲಿದೆ. ಟಿ20ಯಲ್ಲಿ ಪ್ರತಿ 36 ಎಸೆತಗಳಿಗೆ ಪವರ್​ ಪ್ಲೇ ಇರುತ್ತದೆ.
  • ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡ ಫೈನಲ್ ಪ್ರವೇಶಿಸಲಿದೆ. 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಿ, ಇದರಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಸೆಣಸಾಡಲಿದೆ.

ಇದನ್ನೂ ಓದಿ: ದೀಪಕ್‌ ಚಹಾರ್‌ಗೆ 'ನಿನಗೆ ಕ್ರಿಕೆಟ್‌ ಆಗಿಬರೋಲ್ಲ, ಬೇರೆ ಕೆಲಸವಿದ್ದರೆ ನೋಡಿಕೋ' ಎಂದಿದ್ದರಂತೆ ಗ್ರೆಗ್ ಚಾಪೆಲ್‌!

ABOUT THE AUTHOR

...view details