ಕಾಬೂಲ್(ಅಫ್ಘಾನಿಸ್ತಾನ): ಜಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್ ಮುಂಬರುವ ಟಿ20 ವಿಶ್ವಕಪ್ಗಾಗಿ ಅಫ್ಘಾನಿಸ್ತಾನ ತಂಡದ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.
ಆ್ಯಂಡಿ ಫ್ಲವರ್ ಎಸಿಬಿ ಸೇರಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ. ಅವರು ವಿವಿಧ ಫ್ರಾಂಚೈಸಿ ಲೀಗ್ಗಳಲಲ್ಲಿ ನಮ್ಮ ಕೆಲವು ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ನಲ್ಲಿಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಲು ಅವರ ಅಪಾರ ಅನುಭವ ಅನುಕೂಲವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಎಸಿಬಿ ಅಧ್ಯಕ್ಷ ಅಜೀಜುಲ್ಲಾ ಫಜೀಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಫ್ಲವರ್ ಇದಕ್ಕೂ ಮುನ್ನ 2009ರಿಂದ 2014ರವರೆಗೆ ಇಂಗ್ಲೆಂಡ್ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ 2010ರಲ್ಲಿ ಟಿ20 ವಿಶ್ವಕಪ್ ಕೂಡ ಎತ್ತಿ ಹಿಡಿದಿತ್ತು.