ಕರ್ನಾಟಕ

karnataka

ETV Bharat / sports

IPL 2023: ಕೆಕೆಆರ್​ಗೆ ಈ ಜಮೈಕನ್​ ಆಟಗಾರನೇ ಬಲ, ದಾಖಲೆಯ ಸ್ಟ್ರೈಕ್​ ರೇಟ್​ ಪ್ಲೇಯರ್​​ - ETV Bharath Kannada news

ಕೆಕೆಆರ್​ನ ಬ್ಯಾಟಿಂಗ್​ ಮತ್ತು ಬೌಲಿಂಗ್​ ಬಲ ಆಂಡ್ರೆ ರಸೆಲ್ - ಅಯ್ಯರ್​ ಅನುಪಸ್ಥಿತಿಯಲ್ಲಿ ರಸೆಲ್​ಗೆ ನಾಯಕತ್ವ ಸಾಧ್ಯತೆ - ಕೆಕೆಆರ್​ನ ಇಂಪ್ಯಾಕ್ಟ್​ ಪ್ಲೇಯರ್​ ರಸೆಲ್​

Etv Bharat
Etv Bharat

By

Published : Mar 25, 2023, 7:25 PM IST

ನವದೆಹಲಿ: ಐಪಿಎಲ್ ಕ್ರಿಕೆಟ್ ಮಾರ್ಚ್ 31ರಿಂದ ಆರಂಭವಾಗಲಿದೆ. ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಲೀಗ್‌ಗಾಗಿ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಐಪಿಎಲ್ 16ನೇ ಸೀಸನ್ ಆರಂಭವಾಗಲು ಇನ್ನು 5 ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಾ 10 ತಂಡಗಳು ತಮ್ಮ ತಯಾರಿ ಆರಂಭಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಆವೃತ್ತಿಯಲ್ಲಿ, ವಿಶ್ವದಾದ್ಯಂತದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ತಮ್ಮ ಛಾಪನ್ನು ಮೂಡಿಸಲು ಎದುರು ನೋಡುತ್ತಿದ್ದಾರೆ. ಈ ಬಾರಿ ಇಂಪ್ಯಾಕ್ಟ್​ ಪ್ಲೇಯರ್​ ಆಡಿಸುವ ಹೊಸ ರೂಲ್​ನ್ನು ಐಪಿಎಲ್​ನಲ್ಲಿ ಪರಿಚಯಿಸಲಾಗಿದೆ. ಕಳೆದ ಆವೃತ್ತಿಗಳಲ್ಲಿ ಇಂಪ್ಯಾಕ್ಟ್​ ಮಾಡಿದ ಪ್ಲೇಯರ್ ಒಬ್ಬರ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದೇವೆ.

180+ ಸ್ಟ್ರೈಕ್ ರೇಟ್‌ ಬ್ಯಾಟಿಂಗ್​:34ರ ಹರೆಯದ ಜಮೈಕಾದ ಆಲ್‌ರೌಂಡರ್ ಆಂಡ್ರೆ ರಸೆಲ್ ವಿಶ್ವ ಶ್ರೇಷ್ಠ ಬೌಲರ್‌ಗಳ ಬೆವರಿಳಿಸಿದ್ದಾರೆ. ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ (ಕೆಕೆಆರ್​) ಪರ ಬ್ಯಾಟ್​ ಬಿಸುವ ಇವರು ಮೈದಾನದ ಸುತ್ತಲೂ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯುತ್ತಾರೆ. ಐಪಿಎಲ್‌ನಲ್ಲಿ 98 ಪಂದ್ಯಗಳ 82 ಇನ್ನಿಂಗ್ಸ್‌ಗಳಲ್ಲಿ ರಸೆಲ್ 30.37 ಸರಾಸರಿಯಲ್ಲಿ ಒಟ್ಟು 2035 ರನ್ ಗಳಿಸಿದ್ದಾರೆ.

ಈ ಅಂಕಿ ಅಂಶ ಅವರ ಬ್ಯಾಟಿಂಗ್​ನ ಬಿರುಸನ್ನು ತೋರುತ್ತದೆ. ಆಂಡ್ರೆ ರಸೆಲ್ 177.88 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಐಪಿಎಲ್‌ನಲ್ಲಿ ಯಾವುದೇ ಆಟಗಾರನ ಅತ್ಯುತ್ತಮ ಸ್ಟ್ರೈಕ್ ರೇಟ್ ಆಗಿದೆ. ಆಂಡ್ರೆ ರಸೆಲ್ ಕೆಕೆಆರ್‌ಗೆ ಪ್ರಮುಖ ಆಟಗಾರರಾಗಿದ್ದು, ಪಂದ್ಯದ ಗತಿಯನ್ನು ಬದಲಾಯಿಸುವ ಆಟಗಾರರಾಗಿದ್ದಾರೆ. ಅವರ ಬ್ಯಾಟ್​ನಿಂದ ಬರುವ ಸಿಕ್ಸರ್​ಗೆ ಮೈದಾನ ಚಿಕ್ಕದಾಗಿ ಕಾಣುತ್ತದೆ.

ಬೌಲಿಂಗ್​ನಲ್ಲೂ ಸೈ ಎಂಬ ಆಟಗಾರ:ರಸೆಲ್ ಮಾರಣಾಂತಿಕ ಬ್ಯಾಟ್ಸ್‌ಮನ್ ಮತ್ತು ಮಾರಣಾಂತಿಕ ಬೌಲರ್, ಅವರು ತಮ್ಮ ನಿಖರವಾದ ಯಾರ್ಕರ್‌ನಿಂದ ಬ್ಯಾಟ್ಸ್‌ಮನ್‌ಗಳ ಸ್ಟಂಪ್‌ಗಳನ್ನು ಕಿತ್ತುಹಾಕುತ್ತಾರೆ. ರಸೆಲ್ ಉತ್ತಮ ಡೆತ್ ಓವರ್ ಬೌಲರ್ ಆಗಿದ್ದು, ಅವರು ಕೆಕೆಆರ್​ಗಾಗಿ 16-20 ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಐಪಿಎಲ್‌ನ 98 ಪಂದ್ಯಗಳಲ್ಲಿ ರಸೆಲ್ 89 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 15 ರನ್‌ಗಳಿಗೆ 5 ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಮುಂಬರುವ ಐಪಿಎಲ್ ಸೀಸನ್‌ಗಾಗಿ ಅಭ್ಯಾಸ ಸೆಷನ್‌ನಲ್ಲಿ ಆಂಡ್ರೆ ರಸೆಲ್ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ರಸೆಲ್ ಅವರ ಬಿರುಸಿನ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ, ರಸೆಲ್ ಅವರನ್ನು ಈ ಋತುವಿನಲ್ಲಿ ಕೆಕೆಆರ್ ನಾಯಕರನ್ನಾಗಿ ಮಾಡಬಹುದು.

ಕೆಕೆಆರ್​ ತಂಡ:ಶ್ರೇಯಸ್ ಅಯ್ಯರ್, ಮನದೀಪ್ ಸಿಂಗ್, ನಿತೀಶ್ ರಾಣಾ, ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ಶಾಕಿಬ್ ಅಲ್ ಹಸನ್, ಡೇವಿಡ್ ವೈಸ್, ಆಂಡ್ರೆ ರಸೆಲ್, ಎನ್ ಜಗದೀಶನ್, ಲಿಟ್ಟನ್ ದಾಸ್, ರಹಮಾನುಲ್ಲಾ ಗುರ್ಬಾಜ್, ವೈಭವ್ ಅರೋರಾ, ಲಾಕಿ ಫರ್ಗುಸನ್, ಹರ್ಷಿತ್ ರಾಣಾ, ಕುಲ್ವಂತ್ ಖೇಜ್ಡೋಲಿಯಾ, ಸುನಿಲ್​ ನರೈನ್​, ಟಿಮ್​ ಸೌಥಿ, ಸುಯಾಶ್ ಶರ್ಮಾ, ಶಾರ್ದೂಲ್ ಠಾಕೂರ್, ವರುಣ್, ಉಮೇಶ್ ಯಾದವ್

ಇದನ್ನೂ ಓದಿ:WPL 2023 Final: ಕೌರ್​-ಲ್ಯಾನಿಂಗ್​ ಹಣಾಹಣಿ, ಯಾರಿಗೆ ಒಲಿಯಲಿದೆ ಚೊಚ್ಚಲ ಪ್ರಶಸ್ತಿ?

ABOUT THE AUTHOR

...view details