ಲಂಡನ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೋಸ್ಕರ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. 13 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡ ಘೋಷಣೆ ಮಾಡಲಾಗಿದ್ದು, ವೇಗದ ಬೌಲರ್ಗಳಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಮರಳಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮೇ. 29ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಕ್ರಿಕೆಟ್ ಕಾಶಿಯ ಲಾರ್ಡ್ಸ್ನಲ್ಲಿ ನಡೆಯಲಿದೆ. ತಂಡವನ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂದುವರೆಸಲಿದ್ದು, ಕೋಚ್ ಆಗಿ ಬ್ರೆಂಡಮ್ ಮೆಕಲಮ್ ಇರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ 4-0 ಅಂತರದಿಂದ ಸೋಲು ಕಂಡ ಬಳಿಕ ರೂಟ್ ನಾಯಕತ್ವಕ್ಕೆ ವಿದಾಯ ಘೋಷಣೆ ಮಾಡಿದ್ದರು.
ಇದನ್ನೂ ಓದಿ:ತವರಿಗೆ ಮರಳಲು ಅಣಿಯಾದ ಕೇನ್ ವಿಲಿಯಮ್ಸನ್: ಸನ್‌ರೈಸರ್ಸ್ ನಾಯಕತ್ವ ಹೊಣೆ ಯಾರಿಗೆ?
ಇಂಗ್ಲೆಂಡ್ ತಂಡ ಇಂತಿದೆ: ಬೆನ್ ಸ್ಟೋಕ್ಸ್(ಕ್ಯಾಪ್ಟನ್), ಜೋ ರೂಟ್, ಜೆಮ್ಸ್ ಆ್ಯಂಡರ್ಸನ್, ಜಾನ್ ಬೈರ್ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೋಕ್, ಜಾಕ್ ಕ್ರೀವ್ಲಿ, ಬೆನ್ ಫಾಕ್ಸೆ, ಜಾಕ್ ಲೆಂಚ್, ಅಲೆಕ್ಸ್ ಲೆಸ್,ಓವರ್ಟೆನ್, ಒಲೆ ಪೊಪ್ಸ್, ಮ್ಯಾಥ್ಯೂ ಪಾಟ್ಸ್
ನಾಯಕ ಬೆನ್ ಹಾಗೂ ಬ್ರೆಂಡನ್ ಮೆಕಲಂ ಸಾರಥ್ಯಕ್ಕೆ ಇದೊಂದು ಹೊಸ ಚಾಲೆಂಜ್ ಆಗಿದ್ದು, ತಂಡ ಅನುಭವಿ ಹಾಗೂ ಯುವ ಪಡೆಯಿಂದ ಕೂಡಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 23 ವರ್ಷದ ಹ್ಯಾರಿ ಬ್ರೋಕ್ ಹಾಗೂ ಪಾಟ್ಸ್ಗೆ ಮಣೆ ಹಾಕಿದೆ. ಈ ಫ್ಲೇಯರ್ಸ್ ಈಗಾಗಲೇ ತಂಡದ ಪರ ಟಿ-20 ಪಂದ್ಯಗಳನ್ನಾಡಿದ್ದಾರೆ.ಕ್ರಿಕೆಟ್ ಸರಣಿ ಮೇ. 29ರಿಂದ ಜೂನ್ 2ರವರೆಗೆ ಮೊದಲ ಟೆಸ್ಟ್ ಪಂದ್ಯ, ಜೂನ್ 10ರಿಂದ 14ರವರೆಗೆ ಎರಡನೇ ಟೆಸ್ಟ್ ಹಾಗೂ ಜೂನ್ 23ರಿಂದ 27ರವರೆಗೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.