ನವದೆಹಲಿ:ನಿವೃತ್ತಿಯಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಲೀಗ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ.
ವಿಶ್ವದ ಲೆಜೆಂಡರಿ ಕ್ರಿಕೆಟಿಗರೊಂದಿಗೆ ಲೆಜೆಂಡ್ಸ್ ಕ್ರಿಕೆಟ್ ಭಾಗವಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಹಳೆಯ ಪ್ರತಿಸ್ಪರ್ಧಿಗಳ ನಡೆಯುವ ಕಾಳಗವನ್ನು ಲೈವ್ನಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
"ನನ್ನ ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡಲು ಅವಕಾಶ ಹೊಂದಿದ್ದೆ. ನಂತರ ಕ್ರಿಕಟ್ನ ಕೆಲವು ಶ್ರೇಷ್ಠರೊಂದಿಗೆ ಕಮೆಂಟೇಟರ್ ಆಗಿದ್ದೆ. ಆದರೆ, ಈಗ ಅದ್ಭುತ ಲೀಗ್ನ ರಾಯಭಾರಿಯಾಗುತ್ತಿರುವುದು ನಂಬಲಾಸಾಧ್ಯವಾದ ಭಾವನೆಯಾಗಿದೆ. ಕ್ರಿಕೆಟ್ನಲ್ಲಿ ಹಲವಾರು ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ನೀಡಿ ಈ ದಂತಕತೆಗಳು ಮತ್ತೆ ಮೈದಾನಕ್ಕೆ ಮರಳುವುದು ಉಲ್ಲಾಸದಾಯಕವಾಗಿರುತ್ತದೆ.