ಕರ್ನಾಟಕ

karnataka

ETV Bharat / sports

ಗೆಳತಿ ಜೊತೆ ಡೇಟಿಂಗ್​ಗಾಗಿ 300 ರೂ ಕೇಳಿದ ಅಭಿಮಾನಿ.. 500 ರೂ ಗೂಗಲ್​ ಪೇ ಮಾಡಿದ ಅಮಿತ್​ ಮಿಶ್ರಾ - ‘ಕಮೆಂಟ್​ ಮಾಡಿ ಕೋರಿದ ಬೇಡಿಕೆ ವಿಚಿತ್ರ

ಮಾಜಿ ಕ್ರಿಕೆಟಿಗ ಅಮಿತ್​ ಮಿಶ್ರಾ ಅವರ ಟ್ವೀಟ್​ ಗಮ್ಮತ್ತಾಗಿದೆ. ಬಳಕೆದಾರನ ಹಣದ ಬೇಡಿಕೆಯನ್ನು ಈಡೇರಿಸಿದ್ದಾರೆ. ಆ ಬಳಕೆದಾರ ಮಿಶ್ರಾ ಅವರ ಬಳಿ ಹಣ ಪಡೆಯಲು ನೀಡಿದ ಕಾರಣ ಮಾತ್ರ ತಮಾಷೆಯಾಗಿದೆ.

amit-mishra-transfers-money-a-fan-for-date-with-girlfriend
ಮಾಜಿ ಕ್ರಿಕೆಟಿಗ ಅಮಿತ್​ ಮಿಶ್ರಾ

By

Published : Sep 29, 2022, 7:43 PM IST

ಭಾರತದ ಮಾಜಿ ಸ್ಪಿನ್​ ಅಸ್ತ್ರ ಅಮಿತ್ ಮಿಶ್ರಾ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ರಂಜಿಸಲು ಹಲವು ವಿನೋದದ, ಕುತೂಹಲ ಮತ್ತು ವ್ಯಂಗ್ಯವಾದ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್​ನಲ್ಲಿ ಇಂಡಿಯಾ ಲೆಜೆಂಡ್ಸ್‌ನ ಸುರೇಶ್​ ರೈನಾ ಅದ್ಭುತ ಕ್ಯಾಚ್​ ಹಿಡಿದ ವಿಡಿಯೋವನ್ನು ಹಂಚಿಕೊಂಡು ಶ್ಲಾಘಿಸಿದ್ದರು.

ವಿಷಯ ಇಷ್ಟೇ ಆಗಿದ್ದರೆ ಸರಿ ಹೋಗಿತ್ತು. ರೈನಾರನ್ನು ಶ್ಲಾಘಿಸಿ ಅಮಿತ್​ ಮಿಶ್ರಾ ಹಂಚಿಕೊಂಡ ವಿಡಿಯೋಗೆ ಟ್ವಿಟರ್​ ಬಳಕೆದಾರನೊಬ್ಬ ಕಮೆಂಟ್​ ಮಾಡಿ ಕೋರಿದ ಬೇಡಿಕೆ ವಿಚಿತ್ರವಾಗಿದೆ. ಅದೇನೆಂದರೆ, ಕಮೆಂಟ್​ ಬಾಕ್ಸ್​ನಲ್ಲಿ ತಾನು ಬಳಸುವ ಯುಪಿಐ ಲಿಂಕ್​ ಹಾಕಿದ ಆ ವ್ಯಕ್ತಿ, ತನ್ನ ಗೆಳತಿಯನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಬೇಕಿದ್ದು ತನಗೆ 300 ರೂಪಾಯಿ ಹಣ ಕಳುಹಿಸುವಂತೆ ಅಮಿತ್​ ಮಿಶ್ರಾಗೆ ಕೋರಿದ್ದಾನೆ.

ಇದನ್ನು ಗಮನಿಸಿದ ಅಮಿತ್​ ಮಿಶ್ರಾ ಅವರು, ಕೆಲವೇ ನಿಮಿಷಗಳಲ್ಲಿ ಆ ಬಳಕೆದಾರನ ಖಾತೆಗೆ 500 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಬಳಿಕ ಅದರ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, "ಹಣ ಕಳುಹಿಸಿದ್ದೇನೆ. ನಿನ್ನ ಗೆಳತಿಯ ಜೊತೆಗಿನ ಡೇಟಿಂಗ್​ಗೆ ಶುಭವಾಗಲಿ" ಎಂದು ಹರಸಿದ್ದಾರೆ.

ಅಮಿತ್​ ಮಿಶ್ರಾ ಈ ಟ್ವೀಟ್​ಗೆ ಅಭಿಮಾನಿಗಳು ಕಮೆಂಟ್​​ ಮಾಡಿದ್ದು, ಹಣ ಕೊಟ್ಟ ಔದಾರ್ಯ ಮೆರೆದ ಮಾಜಿ ಕ್ರಿಕೆಟಿಗನನ್ನು ಹೊಗಳಿದ್ದಾರೆ.

ಓದಿ:24 ರನ್​ ಗಳಿಸಿದರೆ ಈ ದಾಖಲೆ ಬರೆಯುವ ಕ್ರಿಕೆಟಿಗ ಸೂರ್ಯಕುಮಾರ್​ ಯಾದವ್​.. ಏನದು?

ABOUT THE AUTHOR

...view details