ಕರ್ನಾಟಕ

karnataka

By

Published : Nov 27, 2021, 4:03 PM IST

Updated : Nov 27, 2021, 4:31 PM IST

ETV Bharat / sports

ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

ಆಸ್ಟ್ರೇಲಿಯಾದ ವೇಗದ ಬೌಲರ್​ ಚಾರ್ಲಿ ಟರ್ನರ್​ ತಮ್ಮ ಮೊದಲ 4 ಪಂದ್ಯಗಳಲ್ಲಿ 6 ಬಾರಿ 5 ವಿಕೆಟ್​ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಭಾರತೀಯರಲ್ಲಿ ಲಕ್ಷ್ಮಣ್​ ಶಿವರಾಮಕೃಷ್ಣನ್​ ಮತ್ತು ನರೇಂದ್ರ ಹಿರ್ವಾನಿ ತಲಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ..

Akshar patel picks his 5th five wicket haul
ಅಕ್ಷರ್ ಪಟೇಲ್ 5 ವಿಕೆಟ್​

ಕಾನ್ಪುರ :ಭಾರತ ತಂಡದ ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್ ಮೊದಲ ಟೆಸ್ಟ್​ನ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ತಾವಾಡಿದ ವೃತ್ತಿ ಜೀವನದ ಮೊದಲ 4 ಪಂದ್ಯಗಳಲ್ಲೇ 5ನೇ ಬಾರಿ 5 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.

ಇದೇ ವರ್ಷ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು, ಮೊದಲ ಪಂದ್ಯದಲ್ಲೇ 7 ವಿಕೆಟ್​ ಪಡೆದು ಮಿಂಚಿದ್ದರು. ನಂತರ ಉಳಿದ ಮೂರು ಪಂದ್ಯಗಳಲ್ಲೂ ಒಟ್ಟು 4 ಬಾರಿ 5 ವಿಕೆಟ್​ ಸಾಧನೆ ಮಾಡಿದ್ದರು.

ಇದೀಗ ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲೂ ಅಕ್ಷರ್​ ಕಿವೀಸ್​ನ ಐವರು ಬ್ಯಾಟರ್​ಗಳಿಗೆ ಪೆವಿಲಿಯನ್​​ ದಾರಿ ತೋರಿಸಿದ್ದಾರೆ. ಈ ಮೂಲಕ ಆರಂಭದ 4 ಟೆಸ್ಟ್​ ಪಂದ್ಯಗಳಲ್ಲಿ ಗರಿಷ್ಠ ಬಾರಿ 5 ವಿಕೆಟ್​ ಪಡೆದ ದಾಖಲೆಯನ್ನು ಇಂಗ್ಲೆಂಡ್ ​ಟಾಮ್​ ರಿಚರ್ಡ್ಸನ್​ ಮತ್ತು ಆಸ್ಟ್ರೇಲಿಯಾದ ರಾಡ್ನಿ ಹಾಗ್​ ಜೊತೆಗೆ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ಚಾರ್ಲಿ ಟರ್ನರ್​ ತಮ್ಮ ಮೊದಲ 4 ಪಂದ್ಯಗಳಲ್ಲಿ 6 ಬಾರಿ 5 ವಿಕೆಟ್​ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಭಾರತೀಯರಲ್ಲಿ ಲಕ್ಷ್ಮಣ್​ ಶಿವರಾಮಕೃಷ್ಣನ್​ ಮತ್ತು ನರೇಂದ್ರ ಹಿರ್ವಾನಿ ತಲಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್​ ಲೋಕದ ಕರಾಳ ದಿನಕ್ಕೆ 7 ವರ್ಷ: ಪಿಲಿಫ್​ ಹ್ಯೂಸ್​ ನೆನೆದ ಕ್ರಿಕೆಟ್ ಅಭಿಮಾನಿಗಳು

Last Updated : Nov 27, 2021, 4:31 PM IST

ABOUT THE AUTHOR

...view details