ನವದೆಹಲಿ :ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರೋಹಿತ್, ತಂಡದ ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿದ್ದು, ಅವರಲ್ಲಿ ಶ್ರೇಷ್ಠ ನಾಯಕನ ಗುಣಗಳಿವೆ ಎಂದು ಉಪನಾಯಕ ಅಜಿಂಕ್ಯ ರಹಾನೆ ಹಾಡಿ ಹೊಗಳಿದ್ದಾರೆ. ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಸೋಲಿನ ಬಳಿಕ ರೋಹಿತ್ ನಾಯಕತ್ವಕ್ಕಾಗಿ ಎಲ್ಲ ಕಡೆಯಿಂದ ಬರುತ್ತಿರುವ ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಹಾನೆ ಈ ಹೇಳಿಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ನಾಳೆ ಬುಧವಾರದಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತ ತಂಡದ ಅಜಿಂಕ್ಯ ರಹಾನೆ ನಾಯಕ ರೋಹಿತ್ ಶರ್ಮಾ ಬಗ್ಗೆ ವಿಶೇಷವಾಗಿ ಗುಣಗಾನ ಮಾಡಿದ್ದಾರೆ. ಲಂಡನ್‌ನ ಓವಲ್ನಲ್ಲಿ ಜೂನ್ 7 ರಿಂದ ಜೂನ್ 11 ರವರೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 18 ತಿಂಗಳ ನಂತರ ರಹಾನೆ ಟೆಸ್ಟ್ ತಂಡಕ್ಕೆ ಮರಳಿದ್ದರು. ಈ ಪಂದ್ಯದಲ್ಲಿ ಭಾರತ ಸೋತರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಹಾನೆ ಮೊದಲ ಇನಿಂಗ್ಸ್‌ನಲ್ಲಿ 89 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿ ತಂಡ ಗೆಲುವಿನ ಚಿಗುರೊಡಿಸಿ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರು.
ಇದನ್ನೂ ಓದಿ :Rohit Sharma: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾಗೆ ಕೊಕ್ ಸಂಭವ: ರಹಾನೆಗೆ ಕ್ಯಾಪ್ಟನ್ ಹೊಣೆ?