ಲಾರ್ಡ್ಸ್(ಲಂಡನ್):ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉಪನಾಯಕ ಅಜಿಂಕ್ಯಾ ರಹಾನೆ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 23 ಎಸೆತಗಳಲ್ಲಿ ಕೇವಲ 1ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇವರ ವೈಫಲ್ಯಕ್ಕೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.
ಬ್ಯಾಟಿಂಗ್ನಲ್ಲಿ ರಹಾನೆ ವೈಫಲ್ಯ ಮೊದಲ ಟೆಸ್ಟ್ ಪಂದ್ಯದಲ್ಲೂ ಕೇವಲ 5ರನ್ಗಳಿಕೆ ಮಾಡಿದ್ದ ವೇಳೆ ರನೌಟ್ ಬಲೆಗೆ ಬಿದ್ದು ನಿರಾಸೆಗೊಳಗಾಗಿದ್ದ ರಹಾನೆ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 1ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಕ್ಕೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ರಹಾನೆ 'ನೈಟ್ ವಾಚ್ಮ್ಯಾನ್' ಕೆಲಸ ಸರಿಯಾಗಿ ಮಾಡಿದ್ದಾರೆಂದು ಕಾಲೆಳೆಯುತ್ತಿದ್ದಾರೆ.
42ರನ್ಗಳಿಕೆ ಮಾಡಿದ್ದ ವಿರಾಟ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ನೈಟ್ ವಾಚ್ಮ್ಯಾನ್ ಆಗಿ ಮೈದಾನಕ್ಕಿಳಿದಿದ್ದ ರಹಾನೆ, ನಿನ್ನೆ 21 ಎಸೆತಗಳಲ್ಲಿ 1ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದಿದ್ದರು. ಇಂದು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದ ಉಪನಾಯಕ ತಾವು ಎದುರಿಸಿದ ಎರಡನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಅವರ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಹಾನೆ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. 2020ರಲ್ಲಿ 4 ಟೆಸ್ಟ್ ಪಂದ್ಯಗಳಿಂದ 272ರನ್ಗಳಿಸಿರುವ ಈ ಕ್ರಿಕೆಟಿಗ 2021ರಲ್ಲಿ ಆಡಿರುವ 9 ಟೆಸ್ಟ್ ಪಂದ್ಯಗಳ 14 ಇನ್ನಿಂಗ್ಸ್ಗಳಿಂದ 269ರನ್ ಗಳಿಸಿದ್ದಾರೆ. ಆದರೆ, 2014ರಲ್ಲಿ 10 ಪಂದ್ಯಗಳಿಂದ 809 ರನ್ಗಳಿಸಿದ್ದರು. ಇನ್ನು ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಚೇತೇಶ್ವರ್ ಪೂಜಾರ ಕೂಡಾ ಮೇಲಿಂದ ಮೇಲೆ ವೈಫಲ್ಯ ಅನುಭವಿಸುತ್ತಿದ್ದು, ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ 9ರನ್ಗಳಿಕೆ ಮಾಡಿ ನಿರಾಸೆಗೊಳಗಾಗಿದ್ದಾರೆ.
ಇದನ್ನೂ ಓದಿರಿ: 5 ವಿಕೆಟ್ ಪಡೆದು ಮಿಂಚಿದ ಆ್ಯಂಡರ್ಸನ್: ಟೀಂ ಇಂಡಿಯಾ 364 ರನ್ಗಳಿಗೆ ಆಲೌಟ್