ಕರ್ನಾಟಕ

karnataka

ETV Bharat / sports

10 ವಿಕೆಟ್ ವೀರ ಅಜಾಜ್‌ ಪಟೇಲ್​ಗೆ 'ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ' - ಮಿಚೆಲ್ ಸ್ಟಾರ್ಕ್​

ಈ ಸರಣಿಯಲ್ಲಿ ಅಜಾಜ್​ ಪಟೇಲ್ ಒಟ್ಟು 17 ವಿಕೆಟ್ ಪಡೆದಿದ್ದರು. ಅಜಾಜ್​ ಜೊತೆಗೆ ಭಾರತದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್​ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ ಕೂಡ ಡಿಸೆಂಬರ್​ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದರು.

Ajaz Patel named ICC Player of the Month for December
ಅಜಾಜ್​ ಪಟೇಲ್​ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

By

Published : Jan 10, 2022, 5:28 PM IST

ದುಬೈ: ಭಾರತದ ವಿರುದ್ಧ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್ ಪಡೆದು ಮಿಂಚಿದ್ದ ಕಿವೀಸ್​ ಬೌಲರ್​ ಅಜಾಜ್ ಪಟೇಲ್ ಐಸಿಸಿ ಡಿಸೆಂಬರ್​ ತಿಂಗಳ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಅಜಾಜ್, ಭಾರತದ ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್​ ವಿಕೆಟ್​ ಪಡೆದು ಜಿಮ್​ ಲೇಕರ್​ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ 3ನೇ ಬೌಲರ್​ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದರು. ಜೊತೆಗೆ, 2ನೇ ಇನ್ನಿಂಗ್ಸ್​ನಲ್ಲೂ 4 ವಿಕೆಟ್​ ಪಡೆದಿದ್ದರು.

ಈ ಸರಣಿಯಲ್ಲಿ ಅಜಾಜ್​ ಪಟೇಲ್ ಒಟ್ಟು 17 ವಿಕೆಟ್ ಪಡೆದಿದ್ದರು. ಅಜಾಜ್​ ಜೊತೆಗೆ ಭಾರತದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್​ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ ಕೂಡ ಡಿಸೆಂಬರ್​ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದರು.

ಮಯಾಂಕ್​ ಅವರು ಡಿಸೆಂಬರ್​ನಲ್ಲಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಹಿತ 212 ರನ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಅರ್ಧಶತಕ 60 ರನ್​ ಗಳಿಸಿದ್ದರು. ಇನ್ನು ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್​ 3 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:3ನೇ ಟೆಸ್ಟ್​ಗೆ ನಾನು ಸಂಪೂರ್ಣ ಫಿಟ್​, ಆದರೆ ಆತ ಆಡುವುದು ಡೌಟ್​: ವಿರಾಟ್ ಕೊಹ್ಲಿ

ABOUT THE AUTHOR

...view details