ಪಣಜಿ:ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಅಜಯ್ ಜಡೇಜಾಗೆ 5 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದ್ದು, ಯಾವುದೇ ರೀತಿಯ ಗಲಾಟೆ ಮಾಡದಿದ್ದರೂ ಇವರು ದಂಡ ಪಾವತಿ ಮಾಡಿದ್ದಾರೆ.
ಉತ್ತರ ಗೋವಾದ ಅಲ್ಡೋನಾ ಗ್ರಾಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಬಂಗಲೆ ಹೊಂದಿದ್ದಾರೆ. ಆದರೆ, ಪಕ್ಕದ ಹಳ್ಳಿಯಾದ ನಾಚಿನೋಲಾದಲ್ಲಿ ಕಸ ಎಸೆದಿದ್ದಕ್ಕಾಗಿ ಇದೀಗ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಪಚ್ ಮಾಹಿತಿ ನೀಡಿದ್ದಾರೆ. ಅವರು ದಂಡ ಕೂಡ ಪಾವತಿ ಮಾಡಿದ್ದಾರೆಂದು ತಿಳಿದು ಬಂದಿದೆ.