ಕರ್ನಾಟಕ

karnataka

ETV Bharat / sports

ಭಾರತ-ವೆಸ್ಟ್ ಇಂಡೀಸ್​ ಕ್ರಿಕೆಟ್​​​ ಸರಣಿಗೆ ಸ್ಥಳ ನಿಗದಿ.. ಅಹ್ಮದಾಬಾದ್​, ಕೋಲ್ಕತ್ತಾದಲ್ಲಿ ಟೂರ್ನಿ - ಭಾರತ ವೆಸ್ಟ್ ಇಂಡೀಸ್ ಸರಣಿ

ಕೊರೊನಾ ತೀವ್ರತೆ ನಡುವೆ ಮುಂದಿನ ತಿಂಗಳು ಭಾರತದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕ್ರಿಕೆಟ್ ಸರಣಿ ನಡೆಯಲಿದ್ದು, ಅದಕ್ಕಾಗಿ ಬಿಸಿಸಿಐ ಎರಡು ಸ್ಥಳಗಳನ್ನು ನಿಗದಿ ಮಾಡಿದೆ.

India-West Indies series
India-West Indies series

By

Published : Jan 22, 2022, 9:44 PM IST

ಮುಂಬೈ: ಫೆಬ್ರವರಿ ತಿಂಗಳಲ್ಲಿ ಭಾರತದ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡ ಮೂರು ಏಕದಿನ ಹಾಗೂ ಮೂರು ಟಿ-20 ಕ್ರಿಕೆಟ್​​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಸ್ಥಳ ನಿಗದಿ ಮಾಡಿದೆ. ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಹ್ಮದಾಬಾದ್​ ಹಾಗೂ ಕೋಲ್ಕತ್ತಾ ಮೈದಾನಗಳಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯದಕ್ಕಾಗಿ ಬಿಸಿಸಿಐ ಈ ಹಿಂದೆ ಆರು ಸ್ಥಳ ನಿಗದಿ ಮಾಡಿತ್ತು. ಆದರೆ, ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಇದೀಗ ಕೇವಲ ಎರಡು ಸ್ಥಳಗಳಲ್ಲಿ ಪಂದ್ಯ ನಡೆಸಲು ನಿರ್ಧಾರ ಕೈಗೊಂಡಿದೆ. ಅಹ್ಮದಾಬಾದ್​, ಕೋಲ್ಕತ್ತಾ ಜೊತೆಗೆ ಜೈಪುರ್, ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲೂ ಪಂದ್ಯ ನಡೆಸುವ ಯೋಜನೆ ಹಾಕಿಕೊಂಡಿತ್ತು.

ಇದನ್ನೂ ಓದಿರಿ:ರೋಚಕ ಪಂದ್ಯದಲ್ಲಿ ಪುಣೇರಿ ವಿರುದ್ಧ ಸೋಲು... 35-37 ಅಂತರದಿಂದ ಪಂದ್ಯ ಕೈಚೆಲ್ಲಿದ ಬೆಂಗಳೂರು ಬುಲ್ಸ್​

ಭಾರತ-ವೆಸ್ಟ್ ಇಂಡೀಸ್ ನಡುವೆ ಫೆಬ್ರವರಿ 6ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅಹ್ಮದಾಬಾದ್​ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ತದನಂತರ ಟಿ-20 ಕ್ರಿಕೆಟ್​ ಸರಣಿ ಆಡಲು ಉಭಯ ತಂಡಗಳು ಕೋಲ್ಕತ್ತಾಗೆ ಪ್ರವಾಸ ಕೈಗೊಳ್ಳಲಿವೆ. ಫೆ. 16ರಿಂದ ಪಂದ್ಯಗಳು ಆರಂಭವಾಗಲಿವೆ.

ಭಾರತ-ವೆಸ್ಟ್ ಇಂಡೀಸ್​ ವೇಳಾಪಟ್ಟಿ ಇಂತಿದೆ

  • ಫೆ. 6, ಫೆ, 9 ಹಾಗೂ ಫೆ. 11ರಂದು ಅಹ್ಮದಾಬಾದ್​ನಲ್ಲಿ ಏಕದಿನ ಸರಣಿ
  • ಫೆ.16,ಫೆ, 18 ಹಾಗೂ ಫೆ. 20ರಂದು ಕೋಲ್ಕತ್ತಾದಲ್ಲಿ ಟಿ20 ಪಂದ್ಯಗಳು

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details