ಕರ್ನಾಟಕ

karnataka

ETV Bharat / sports

ಭಾರತ ಸರಣಿ ಮುನ್ನ ಕೋವಿಡ್​ ಭಯಕ್ಕೆ ದೇಶಿ ಟೂರ್ನಮೆಂಟ್ ಮುಂದೂಡಿದ ದಕ್ಷಿಣ ಆಫ್ರಿಕಾ - ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ

ಮುಂದೂಡಿರುವ ನಾಲ್ಕನೇ ಸುತ್ತಿನ ಪ್ರಥಮ ದರ್ಜೆ ಪಂದ್ಯಗಳ ಮರು ವೇಳಾಪಟ್ಟಿಯನ್ನು ಹೊಸ ವರ್ಷದಲ್ಲಿ ಪ್ರಕಟಿಸಲಾಗುವುದು ಎಂದು ಬೋರ್ಡ್​ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಸ್ತುತ 4ನೇ ಅಲೆಯ ಕೊರೊನಾ ಬಿಕ್ಕಟ್ಟು ತಲೆದೂರಿದೆ. ಕಳೆದ ತಿಂಗಳು ಇಲ್ಲಿಯೇ ಮೊದಲ ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಹಲವಾರು ಕ್ರೀಡಾಕೂಟಗಳು ರದ್ದಾಗಿವೆ..

CSA postpones domestic matches over COVID fears
ಕ್ರಿಕೆಟ್ ದಕ್ಷಿಣ ಆಫ್ರಿಕಾ

By

Published : Dec 19, 2021, 8:11 PM IST

ಜೋಹನ್ಸ್​ಬರ್ಗ್ :ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೋವಿಡ್​ 19 ಮುನ್ನೆಚ್ಚರಿಕೆ ಕಾರಣದಿಂದ 4 ದಿನಗಳ ಟೂರ್ನಮೆಂಟ್‌ ಅನ್ನು ಮುಂದೂಡಿರುವುದಾಗಿ ಭಾನುವಾರ ಘೋಷಣೆ ಮಾಡಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ(CSA) ಭಾರತದ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಗೆ ಕೇವಲ ಒಂದು ವಾರ ಇರುವಾಗ ತನ್ನ ಪ್ರಮುಖ ಪ್ರಥಮ ದರ್ಜೆ ಟೂರ್ನೆಮೆಂಟ್​ ಮುಂದೂಡಿರುವುದಾಗಿ ಪ್ರಕಟಣೆ ಹೊರಡಿಸಿದೆ.

ಕಳೆದ ಕೆಲವು ವಾರಗಳಿಂದ ಕೋವಿಡ್​ 19 ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಂಡಳಿ ತಿಳಿಸಿದೆ. ಕೋವಿಡ್​-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಯೋಬಬಲ್​ ಹೊರಗೆ ಡಿಸೆಂಬರ್ 16-19 ಮತ್ತು ಡಿಸೆಂಬರ್ 19-22 ನಡುವೆ ನಡೆಯಬೇಕಿದ್ದ ಐದನೇ ಸುತ್ತಿನ ಡೊಮೆಸ್ಟಿಕ್​ ಪಂದ್ಯಗಳನ್ನು ಮುಂದೂಡುವ ನಿರ್ಧಾರವನ್ನು ಕ್ರಿಕೆಟ್​ ದಕ್ಷಿಣ ಆಫ್ರಿಕಾ ಆಟಗಾರರ ಆರೋಗ್ಯ ಸುರಕ್ಷತೆಯ ಕಾರಣ ಮುಂದೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದೂಡಿರುವ ನಾಲ್ಕನೇ ಸುತ್ತಿನ ಪ್ರಥಮ ದರ್ಜೆ ಪಂದ್ಯಗಳ ಮರು ವೇಳಾಪಟ್ಟಿಯನ್ನು ಹೊಸ ವರ್ಷದಲ್ಲಿ ಪ್ರಕಟಿಸಲಾಗುವುದು ಎಂದು ಬೋರ್ಡ್​ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಸ್ತುತ 4ನೇ ಅಲೆಯ ಕೊರೊನಾ ಬಿಕ್ಕಟ್ಟು ತಲೆದೂರಿದೆ. ಕಳೆದ ತಿಂಗಳು ಇಲ್ಲಿಯೇ ಮೊದಲ ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಹಲವಾರು ಕ್ರೀಡಾಕೂಟಗಳು ರದ್ದಾಗಿವೆ.

ಇದನ್ನೂ ಓದಿ: 2ನೇ ಆ್ಯಶಸ್​ ಟೆಸ್ಟ್​ : ಇಂಗ್ಲೆಂಡ್​ 468 ರನ್​ಗಳ ಬೃಹತ್ ಗುರಿ ನೀಡಿ ಆಸ್ಟ್ರೇಲಿಯಾ

ABOUT THE AUTHOR

...view details