ಕರ್ನಾಟಕ

karnataka

ETV Bharat / sports

9 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್​ನಲ್ಲಿ ನಾಕೌಟ್ ಪ್ರವೇಶಿಸಲು ಭಾರತ ವಿಫಲ - ಸೆಮಿಫೈನಲ್​ ಪ್ರವೇಶಿಸಲು ಭಾರತ ವಿಫಲ

ಭಾರತ ತಂಡದ 2011ರ ಏಕದಿನ ವಿಶ್ವಕಪ್​ ಗೆದ್ದ ಬಳಿಕ 2012 ಟಿ20 ವಿಶ್ವಕಪ್​ನಲ್ಲಿ ರನ್​ರೇಟ್​ನಲ್ಲಿ ಹಿಂದುಳಿದ ಕಾರಣ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆದರೆ ಆ ನಂತರ ನಡೆದ ಎಲ್ಲಾ ಐಸಿಸಿ ಟೂರ್ನಮೆಂಟ್​ನಲ್ಲಿ ಕನಿಷ್ಠ ಸೆಮಿಫೈನಲ್​ ಪ್ರವೇಶಿಸುವಲ್ಲಿ ಸಫಲವಾಗಿತ್ತು.

ICC Tournament India
ಐಸಿಸಿ ಟೂರ್ನಮೆಂಟ್​ ಭಾರತ

By

Published : Nov 7, 2021, 8:36 PM IST

ನವದೆಹಲಿ: ಕಳೆದೊಂದು ದಶಕದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸಿ ವಿಶ್ವದ ಪ್ರಬಲ ಕ್ರಿಕೆಟ್​ ರಾಷ್ಟ್ರವಾಗಿದ್ದ ಭಾರತ ತಂಡ 2013ರಿಂದ ಇಲ್ಲಿಯವರೆಗೆ ನಡೆದಿದ್ದ ಎಲ್ಲಾ ಐಸಿಸಿ ಟೂರ್ನಮೆಂಟ್​ಗಳಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಇದೇ ಮೊದಲ ಬಾರಿಗೆ 10 ವರ್ಷಗಳಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದೆ.

ಭಾರತ ತಂಡದ 2011ರ ಏಕದಿನ ವಿಶ್ವಕಪ್​ ಗೆದ್ದ ಬಳಿಕ 2012 ಟಿ20 ವಿಶ್ವಕಪ್​ನಲ್ಲಿ ರನ್​ರೇಟ್​ನಲ್ಲಿ ಹಿಂದುಳಿದ ಕಾರಣ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆದರೆ ಆ ನಂತರ ನಡೆದ ಎಲ್ಲಾ ಐಸಿಸಿ ಟೂರ್ನಮೆಂಟ್​ನಲ್ಲಿ ಕನಿಷ್ಠ ಸೆಮಿಫೈನಲ್​ ಪ್ರವೇಶಿಸುವಲ್ಲಿ ಸಫಲವಾಗಿತ್ತು.

ಕಳೆದೊಂದು ದಶಕದಲ್ಲಿ ಐಸಿಸಿ ಟೂರ್ನಮೆಂಟ್​​ನಲ್ಲಿ ಭಾರತದ ಸಾಧನೆ ಹೀಗಿದೆ..

2013 ಚಾಂಪಿಯನ್​ ಟ್ರೋಫಿ: ಚಾಂಪಿಯನ್​

ಇಂಗ್ಲೆಂಡ್​ನಲ್ಲಿ ನಡೆದಿದ್ದ ಚಾಂಪಿಯನ್​ ಟ್ರೋಫಿಯಲ್ಲಿ ಭಾರತ ತಂಡ ಅಜೇಯವಾಗಿ ಟ್ರೋಪಿ ಎತ್ತಿ ಹಿಡಿದಿತ್ತು. ಲೀಗ್​ನಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದರೆ, ಸೆಮಿಫೈನಲ್​ನಲ್ಲಿ ಶ್ರೀಲಂಕಾ ಮತ್ತು ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 5 ರನ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್​ ಆಗಿತ್ತು.

2014 ಟಿ20 ವಿಶ್ವಕಪ್​: ರನ್ನರ್ ಅಪ್

ಬಾಂಗ್ಲಾದೇಶದಲ್ಲಿ ನಡೆದಿದ್ದ 5ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಲೀಗ್​ನಲ್ಲಿ ಎಲ್ಲಾ 4 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಮೆರೆದಿತ್ತು. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್​ಗಳಿಂದ ಸೋಲು ಕಂಡಿತ್ತು.

2015ರ ಏಕದಿನ ವಿಶ್ವಕಪ್​: ಸೆಮಿಫೈನಲ್

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲಿ ಅಜೇಯರಾಗಿದ್ದ ಭಾರತ ತಂಡ ಕ್ವಾರ್ಟರ್​ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು ​​ಮಣಿಸಿದ್ದ ಭಾರತ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

2016 ಟಿ20 ವಿಶ್ವಕಪ್​: ಸೆಮಿಫೈನಲ್

ತವರಿನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಲೀಗ್​ನಲ್ಲಿ 2ನೇ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾ ಕ್ವಾರ್ಟರ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತ್ತು ಸೆಮಿಫೈನಲ್​ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತ್ತು.

2017 ಚಾಂಪಿಯನ್ ಟ್ರೋಫಿ: ರನ್ನರ್ ಅಪ್

ಇಂಗ್ಲೆಂಡ್​ನಲ್ಲಿ ನಡೆದಿದ್ದ 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಲೀಗ್​ನಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಿತ್ತು. ಫೈನಲ್​ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಾಣುವ ಮೂಲಕ ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು.

2019 ಏಕದಿನ ವಿಶ್ವಕಪ್​: ಸೆಮಿಫೈನಲ್​

ಇಂಗ್ಲೆಂಡ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರಸ್ಥಾನ ಪಡೆದಿದ್ದ ಭಾರತ ತಂಡ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 18 ರನ್​ಗಳ ವಿರೋಚಿತ ಸೋಲು ಕಂಡು ನಿರಾಶೆಯ ಅನುಭವಿಸಿತ್ತು.

2021 ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​: ರನ್ನರ್ ಅಪ್

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಪ್ರಾಬಲ್ಯಯುತ ಪ್ರದರ್ಶನ ತೋರಿ ಫೈನಲ್​ ತಲುಪಿದ್ದ ಭಾರತ ತಂಡ ಮತ್ತೆ ನ್ಯೂಜಿಲ್ಯಾಂಡ್​ ವಿರುದ್ಧವೇ ಸೋಲು ಕಂಡು ರನ್ನರ್ ಅಪ್​ಗೆ ತೃಪ್ತಿ ಪಡೆದಿತ್ತು.

ಇದನ್ನೂ ಓದಿ:7 ಟಿ20 ವಿಶ್ವಕಪ್​: 4ನೇ ಬಾರಿ ಗುಂಪು ಹಂತದಲ್ಲೇ ಹೊರಬಿದ್ದ ಟೀಂ ಇಂಡಿಯಾ

ABOUT THE AUTHOR

...view details