ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಗೆಲುವು ಸಂಭ್ರಮಿಸಿ ಪಾಕಿಸ್ತಾನಕ್ಕೆ ಉರಿಸಿದ ಆಫ್ಘನ್​ ಅಭಿಮಾನಿಗಳು!

ಪಾಕ್​ಗೆ ಆಫ್ಘನ್​ ಅಭಿಮಾನಿಗಳ ಚಾಟಿ; ಪಾಕಿಸ್ತಾನ ಅಫ್ಘಾನಿಸ್ತಾನ ಮುಸ್ಲಿಂ ರಾಷ್ಟ್ರಗಳೇ ಆದರೂ ಕ್ರಿಕೆಟ್​ನಲ್ಲಿ ಮಾತ್ರ ವೈರಿಗಳಾಗಿವೆ. ಉಭಯ ತಂಡಗಳ ಅಭಿಮಾನಿಗಳು ಶಾರ್ಜಾದಲ್ಲಿ ಬಡಿದಾಡಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಈಗ ಶ್ರೀಲಂಕಾ ವಿಜಯವನ್ನು ಆಫ್ಘನ್​ರು ಸಂಭ್ರಮಿಸಿ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ.

afghans-celebrate-sri-lankas-asia-cup-2022-win
ಪಾಕಿಸ್ತಾನಕ್ಕೆ ಉರಿಸಿದ ಅಫ್ಘನ್​ ಅಭಿಮಾನಿಗಳು!

By

Published : Sep 12, 2022, 10:08 PM IST

Updated : Sep 12, 2022, 10:46 PM IST

ಕಾಬೂಲ್, ಅಫ್ಘಾನಿಸ್ತಾನ:ಏಷ್ಯಾ ಕಪ್​ ಸೂಪರ್​ 4 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಆಟಗಾರರ ಮಧ್ಯೆ ಘರ್ಷಣೆ ಸಂಭವಿಸಿತ್ತು. ಇದು ಮೈದಾನದ ಹೊರಗೂ ಪ್ರತಿಬಿಂಬಿಸಿ ಉಭಯ ರಾಷ್ಟ್ರಗಳ ಅಭಿಮಾನಿಗಳು ಹೊಡೆದಾಡಿಕೊಂಡು, ಶಾರ್ಜಾ ಕ್ರೀಡಾಂಗಣದ ಕುರ್ಚಿಗಳನ್ನು ಧ್ವಂಸ ಮಾಡಿದ್ದರು. ಇದೀಗ ಫೈನಲ್​ ಪಂದ್ಯದಲ್ಲಿ ಸೋಲುಂಡ ಪಾಕಿಸ್ತಾನವನ್ನು​ ಆಫ್ಘನ್​ ಅಭಿಮಾನಿಗಳು ಗೇಲಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಹತವಾಗಿ ಟೀಕೆ ಮಾಡುತ್ತಿದ್ದಾರೆ.

ಶ್ರೀಲಂಕಾದ ಏಷ್ಯಾ ಕಪ್ ಗೆಲುವನ್ನು ತಮ್ಮದೇ ಗೆಲುವು ಎಂಬಂತೆ ರಸ್ತೆಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಹಾದಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆಫ್ಘನ್​ ಅಭಿಮಾನಿಗಳು ಇಷ್ಟೆಲ್ಲ ಮಾಡುತ್ತಿರುವುದು ಪಾಕಿಸ್ತಾನವನ್ನು ಉರಿಸಲು ಅನ್ನೋದು ಸತ್ಯ.

ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರರು ಯುವಶಕ್ತಿಯ ಸಾಮರ್ಥ್ಯ ಸಾಬೀತು ಮಾಡಿದರು. ಆರಂಭದಲ್ಲಿ ಪಟಪಟನೇ ವಿಕೆಟ್​ ಕಳೆದುಕೊಂಡರೂ ಬಳಿಕ ಬನುಕಾ ರಾಜಪಕ್ಸೆ ಹೋರಾಟದ ಫಲದಿಂದ 170 ರನ್​ ಬಾರಿಸಿತು. ಬಳಿಕ ಬೌಲಿಂಗ್​ನಲ್ಲೂ ಮಿಂಚಿದ ಲಂಕಾ ಪಡೆ ಪಾಕಿಸ್ತಾನವನ್ನು 147 ರನ್​ಗಳಿಗೆ ಬಗ್ಗು ಬಡಿದು 6ನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

ಶ್ರೀಲಂಕಾದ ಈ ವಿಕ್ರಮವನ್ನು ಆಫ್ಘನ್​ ಅಭಿಮಾನಿಗಳು ತಮ್ಮ ದೇಶದ ತಂಡವೇ ಟ್ರೋಫಿ ಗೆದ್ದಂತೆ ಸಂಭ್ರಮಾಚರಣೆ ಮಾಡಿದ್ದಾರೆ. ಹರ್ಷೋದ್ಗಾರಗಳೊಂದಿಗೆ, ಕುಣಿದು ಕುಪ್ಪಳಿಸುತ್ತಿರುವ ಜನಸಮೂಹದ ವಿಡಿಯೋವನ್ನು ಅಫ್ಘಾನಿಸ್ತಾನದ ಪತ್ರಕರ್ತ ಅಬ್ದುಲ್ಹಕ್ ಒಮೆರಿ ಅವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದಲ್ಲದೇ, ಶ್ರೀಲಂಕಾ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲಾಗಿ ಗೆಲುವಿನ ಶುಭಾಶಯ ತಿಳಿಸಿದ್ದಲ್ಲದೇ, ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕಳಪೆ ಫೀಲ್ಡಿಂಗ್​ ಅನ್ನು ಗೇಲಿ ಮಾಡಿದ ಫೋಟೋವನ್ನು ಹರಿಬಿಟ್ಟಿದ್ದಾರೆ.

ಪಾಕ್​ಗೆ ಆಫ್ಘನ್​ ಅಭಿಮಾನಿಗಳ ಚಾಟಿ ಹೀಗಿದೆ:

ಪಾಕ್​ಗೆ ಅಫ್ಘನ್​ ಅಭಿಮಾನಿಗಳ ಚಾಟಿ

1) "ಏಷ್ಯಾ ಕಪ್​ ಗೆದ್ದ ಶ್ರೀಲಂಕಾಗೆ ಅಭಿನಂದನೆಗಳು. ಮಿಗಿಲಾಗಿ ನಮ್ಮನ್ನು ತುಂಬಾ ಸಂತೋಷಪಡಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಗೆಲುವನ್ನು ಅಫ್ಘಾನಿಸ್ತಾನ ಸಂಭ್ರಮಿಸುತ್ತಿದೆ" ಎಂದು ಬಳಕೆದಾರನೊಬ್ಬ ಟ್ವೀಟ್ ಮಾಡಿದ್ದಾನೆ.

ಶ್ರೀಲಂಕಾ ಗೆಲುವು ಸಂಭ್ರಮಿಸಿದ ಅಫ್ಘನ್​ ಅಭಿಮಾನಿಗಳು

2) ಶ್ರೀಲಂಕಾ ವಿಜಯದ ಫೋಟೋವನ್ನು ಐಸಿಸಿ ಪೋಸ್ಟ್ ಮಾಡಿದ ಚಿತ್ರಕ್ಕೆ ಕೊಂಡಿಯಾಗಿ "ಚಾಂಪಿಯನ್​ ತಂಡದೆದುರು ನೀವು 2 ಬಾರಿ ಸೋತಿರಿ, ನಾವು 1 ಬಾರಿ ಗೆದ್ದಿದ್ದೇವೆ" ಎಂದು ಗೇಲಿ ಮಾಡಲಾಗಿದೆ.

ಶ್ರೀಲಂಕಾ ಗೆಲುವು ಸಂಭ್ರಮಿಸಿದ ಅಫ್ಘನ್​ ಅಭಿಮಾನಿಗಳು

3) ಮತ್ತೊಬ್ಬ ಬಳಕೆದಾರ ಅಫ್ಘಾನಿಸ್ತಾನದ ಅಭಿಮಾನಿಗಳು ಬೀದಿಗಳಲ್ಲಿ ನೃತ್ಯ ಮಾಡುವ ಮೂಲಕ ಶ್ರೀಲಂಕಾ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಡಿ ಬರಹವಾಗಿ "ಅಫ್ಘಾನಿಸ್ತಾನದ ಜನರು ಶ್ರೀಲಂಕಾದ ವಿಜಯವನ್ನು ಹೀಗೆ ಆಚರಿಸುತ್ತಾರೆ. #AsiaCup2022," ಅವರು ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾ ಗೆಲುವು ಸಂಭ್ರಮಿಸಿದ ಅಫ್ಘನ್​ ಅಭಿಮಾನಿಗಳು

4) ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪೋಸ್ಟ್ ಮಾಡಿದ ವಿಡಿಯೋದ ಕಾಮೆಂಟ್‌ಗಳಲ್ಲಿ ರೀಪೋಸ್ಟ್ ಮಾಡಿದ ಫೋಟೋದಲ್ಲಿ ಅಫ್ಘಾನಿಸ್ತಾನದ ಅಭಿಮಾನಿಯೊಬ್ಬರು ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆ ತಮಾಷೆ ಮಾಡಿದ್ದಾರೆ.

ಶ್ರೀಲಂಕಾ ಗೆಲುವು ಸಂಭ್ರಮಿಸಿದ ಅಫ್ಘನ್​ ಅಭಿಮಾನಿಗಳು

5) ಫೈನಲ್‌ನಲ್ಲಿ ಪಾಕಿಸ್ತಾನ ಸೋತದ್ದನ್ನು ವ್ಯಂಗ್ಯವಾಗಿ ಚಿತ್ರಿಸಿದ ಬಳಕೆದಾರ "ಪಾಕಿಸ್ತಾನದ ಅವನತಿಯೇ ನನ್ನ ಸಂತೋಷ" ಎಂದು ಟ್ವೀಟ್ ಮಾಡಿದ್ದಾನೆ.

ಶಾರ್ಜಾದಲ್ಲಿ ನಡೆದಿದ್ದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಕೊನೇ ಓವರಿನಲ್ಲಿ ಅಪ್ಘಾನಿಸ್ತಾನವನ್ನು ಸೋಲಿಸಿತ್ತು. ಪಾಕ್​ನ ಆಸಿಫ್​ ಅಲಿ ಅಫ್ಘನ್​ ಬೌಲರ್​ ಅನ್ನು ಕೆಣಕಿ ಬ್ಯಾಟ್​ನಿಂದ ಹೊಡೆಯಲು ಹೋಗಿದ್ದರು. ಇದು ಮೈದಾನದ ಹೊರಗಿನ ಅಭಿಮಾನಿಗಳಲ್ಲಿ ಕ್ರೋಧ ಉಂಟು ಮಾಡಿತ್ತು. ಪಂದ್ಯದ ಬಳಿಕ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು ಪ್ರೇಕ್ಷಕರ ಗ್ಯಾಲರಿಯ ಕುರ್ಚಿಗಳನ್ನು ಕಿತ್ತು ಒಬ್ಬರ ಮೇಲೊಬ್ಬರು ಎಸೆದಿದ್ದರು.

ಏಷ್ಯಾ ಕಪ್​ನ ಆರಂಭದ ಪಂದ್ಯದಲ್ಲಿಯೇ ಶ್ರೀಲಂಕಾವನ್ನು ಮಣಿಸಿದ್ದ ಅಫ್ಘಾನಿಸ್ತಾನ ಸಾಮರ್ಥ್ಯ ಸಾಬೀತು ಮಾಡಿತ್ತು. ಗ್ರೂಪ್ ಹಂತದ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಸೂಪರ್​ 4 ಹಂತಕ್ಕೆ ಲಗ್ಗೆ ಇಟ್ಟಿತ್ತು. ಇದಾದ ಬಳಿಕ ಸೂಪರ್ ಫೋರ್​ನಲ್ಲಿ ಶ್ರೀಲಂಕಾ, ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಸತತವಾಗಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.

ಓದಿ:ಕ್ಯಾಚ್‌ ಬಿಟ್ಟು ಮ್ಯಾಚ್‌ ಕಳೆದುಕೊಂಡರೇ ಪಾಕ್ ಆಟಗಾರರು? ಸಿಕ್ಕಾಪಟ್ಟೆ ಟ್ರೋಲ್‌

Last Updated : Sep 12, 2022, 10:46 PM IST

ABOUT THE AUTHOR

...view details