ಮೆಲ್ಬೋರ್ನ್: ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡೂ ತಂಡಗಳಿಗೆ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ನಗರದಲ್ಲಿ ದಿನವಿಡೀ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಟಾಸ್ ಅನಿರ್ದಿಷ್ಟವಾಗಿ ವಿಳಂಬವಾಗಿತ್ತು. 5 ಓವರ್ಗಳ ಪಂದ್ಯ ನಡೆಸುವ ಚಿಂತನೆ ಮಾಡಲಾಗಿತ್ತಾದರೂ ಮಳೆ ಬಿಡದ ಹಿನ್ನೆಲೆ ಪಂದ್ಯ ರದ್ದಾಗಿದೆ.
ಅಫ್ಘಾನಿಸ್ತಾನದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅವಿಸ್ಮರಣೀಯ ಗೆಲುವನ್ನು ಐರ್ಲೆಂಡ್ ಸಾಧಿಸಿದೆ. ಸೂಪರ್ 12 ಹಂತದ ಮೂರನೇ ಪಂದ್ಯ ಐರ್ಲೆಂಡ್ ಆಡುತ್ತಿದ್ದು, ಶ್ರೀಲಂಕಾ ಎದುರು ಸೋತು, ಇಂಗ್ಲೆಂಡ್ ಎದುರು ಮಳೆಯಿಂದಾಗಿ ಡಿಎಲ್ಎಸ್ ನಿಯಮದಿಂದ 5 ರನ್ಗಳ ಗೆಲುವು ಸಾಧಿಸಿತ್ತು.