ಕರ್ನಾಟಕ

karnataka

By

Published : Dec 14, 2021, 6:49 PM IST

ETV Bharat / sports

ಭಾರತದ ವಿರುದ್ಧ ಮೊದಲ ಬಾರಿ ಏಕದಿನ ಸರಣಿ ಆಡಲಿದೆ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ಮುಂದಿನ ಎರಡೂ ವರ್ಷಗಳ ವೇಳಾಪಟ್ಟಿಯಲ್ಲಿ 52 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಇದರಲ್ಲಿ 37 ಏಕದಿನ ಪಂದ್ಯಗಳು, 12 ಟಿ-20 ಮತ್ತು 3 ಟೆಸ್ಟ್​ ಪಂದ್ಯಗಳನ್ನಾಡಲಿದೆ.

Afghanistan cricket team to play three ODIs against India in 2022
ಭಾರತ ಅಫ್ಘಾನಿಸ್ತಾನ ಏಕದಿನ ಸರಣಿ

ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್​ ತಂಡ 2022 - 23ರ ಎಫ್​ಟಿಪಿ ವೇಳಾಪಟ್ಟಿಯಲ್ಲಿರುವಂತೆ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಎರಡೂ ತಂಡಗಳಿಗೂ ಇದು ಮೊದಲ ದ್ವಿಪಕ್ಷೀಯ ಏಕದಿನ ಸರಣಿಯಾಗಿದೆ.

ಅಫ್ಘಾನಿಸ್ತಾನ ಮುಂದಿನ ಎರಡೂ ವರ್ಷಗಳ ವೇಳಾಪಟ್ಟಿಯಲ್ಲಿ 52 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಇದರಲ್ಲಿ 37 ಏಕದಿನ ಪಂದ್ಯಗಳು, 12 ಟಿ-20 ಮತ್ತು 3 ಟೆಸ್ಟ್​ ಪಂದ್ಯಗಳನ್ನಾಡಲಿದೆ.

ಈ ಅವಧಿಯಲ್ಲಿ ಅಫ್ಘಾನಿಸ್ತಾನ 2022ರ ಏಷ್ಯಾಕಪ್​ ಮತ್ತು ಟಿ-20 ವಿಶ್ವಕಪ್​ 2023ರಲ್ಲಿ ಮತ್ತೊಂದು ಏಷ್ಯಾಕಪ್ ಮತ್ತು ​ ಏಕದಿನ ವಿಶ್ವಕಪ್ ಕೂ ಸೇರಿವೆ. ಟಿ-20 ವಿಶ್ವಕಪ್​ ಸೂಪರ್​ ಲೀಗ್​ ಭಾಗವಾಗಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಭಾರತ ಸರಣಿಗೂ ಮುನ್ನ ನೆದರ್ಲೆಂಡ್ಸ್ , ಜಿಂಬಾಬ್ವೆ, ಬಾಂಗ್ಲಾದೇಶ ವಿರುದ್ಧ 2022ರಲ್ಲಿ 3 ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿಯನ್ನಾಡಲಿದೆ.

2022ರಲ್ಲಿ ಭಾರತದ ಸರಣಿಯ ನಂತರ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯನ್ನಾಡಲಿರುವ ಆಫ್ಘಾನ್​ 2023ರಲ್ಲಿಏಕದಿನ ವಿಶ್ವಕಪ್ ಸೂಪರ್​ ಲೀಗ್​ ಭಾಗವಾಗಿ ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ವೆಸ್ಟ್​ ಇಂಡೀಸ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್‌ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!

ABOUT THE AUTHOR

...view details