ಶಾರ್ಜಾ(ಯುಎಇ): ಮೊಹಮ್ಮದ್ ನಬಿಯ ಆಲ್ರೌಂಡರ್ ಪ್ರದರ್ಶನ ಮತ್ತು ಅಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆಯ ನೆರವಿನಿಂದ ತಂಡವು ಶುಕ್ರವಾರ ಶಾರ್ಜಾದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವು ಅಫ್ಘಾನಿಸ್ತಾನಕ್ಕೆ ಐತಿಹಾಸ ಕ್ಷಣವಾಗಿದೆ.
11 ವರ್ಷಗಳ ನಂತರ ಉಭಯ ತಂಡಗಳು ಮುಖಾಮುಖಿಯಾಗಿದ್ದು, ರಶೀದ್ ಖಾನ್ ಪಡೆ ಅಂತಿಮವಾಗಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ತೆಗೆದುಕೊಂಡತು. ಆದರೆ ಪಕ್ ನಾಯಕ ಬ್ಯಾಟಿಂಗ್ ಮಾಡುವ ಚಿಂತನೆ ಬುಡಮೇಲಾಯಿತು. ಅತೀ ಕಡಿಮೆ ರನ್ ಗುರಿಯನ್ನು ಪಾಕ್ ತಂಡ ಅಫ್ಘಾನ್ಗೆ ನೀಡಿತು.
20 ಓವರ್ಗೆ ಪಾಕ್ ತಂಡ 9 ವಿಕೆಟ್ ನಷ್ಟ ಅನುಭವಿಸಿ ಕೇವಲ 93ರನ್ನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಅಘ್ಫಾನ್ 17.5 ಓವರ್ನಲ್ಲೇ 4 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು. ಪಾಕಿಸ್ತಾನ ಟಿ20ಯಲ್ಲಿ ಗಳಿಸಿದ ಅತೀ ಕನಿಷ್ಠ ರನ್ ಪಟ್ಟಿಯಲ್ಲಿ ಇದು ಐದನೇಯದ್ದಾಗಿದೆ. ಈ ಹಿಂದೆ 2012ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 74 ರನ್, 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 82, 2016 ರಲ್ಲಿ ಭಾರತದ ವಿರುದ್ಧ 83, 2010ರಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ನಿನ್ನೆ ಅಫ್ಘಾನಿಸ್ತಾನದ ವಿರುದ್ಧ 92 ರನ್ ಗಳಿಸಿದೆ.
ಪಾಕಿಸ್ತಾನದ ನಾಲ್ಕು ಬ್ಯಾಟರ್ ಮಾತ್ರ 10+ ರನ್ ಗಳಿಸಿದರು. ಇಮಾದ್ ವಾಸಿಂ 18, ಚೊಚ್ಚಲ ಆಟಗಾರ ಸೈಮ್ ಅಯೂಬ್ 17 ಮತ್ತು ತಯ್ಯಬ್ ತಾಹಿರ್ 16 ಹಾಗೂ ನಾಯಕ ಶಾದಾಬ್ ಖಾನ್ 12 ರನ್ ಗಳಿಸಿದ್ದೇ ಹೆಚ್ಚಿನ ರನ್ ಆಗಿತ್ತು. ಅಫ್ಘಾನ್ ಪರ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು.