ಆ್ಯಂಟಿಗುವಾ(ವೆಸ್ಟ್ ಇಂಡೀಸ್):ಅಂಡರ್-19 ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಶ್ರೀಲಂಕಾ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ನಿನ್ನೆ ಆ್ಯಂಟಿಗುವಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡುವ ಮೂಲಕ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ತಂಡ 47.1 ಓವರ್ಗಳಲ್ಲಿ 134ರನ್ಗಳಿಗೆ ಆಲೌಟ್ ಆಯಿತು. ಈ ರನ್ ಗುರಿ ಬೆನ್ನತ್ತಿದ ಲಂಕಾ ತಂಡ 46 ಓವರ್ಗಳಲ್ಲಿ ಕೇವಲ 130ರನ್ಗಳಿಕೆ ಮಾಡುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 4 ರನ್ಗಳ ಸೋಲು ಕಂಡಿತ್ತು.