ಶಾರ್ಜಾ:ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಸಿಂಹಳೀಯರ ವಿರುದ್ಧ 9 ವಿಕೆಟ್ಗಳ(DLS) ಗೆಲುವು ದಾಖಲು ಮಾಡಿದ್ದು, ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭದಲ್ಲೇ ಲಂಕಾ ತಂಡದ ಆರಂಭಿಕರಾದ ಚಮೀಡಾ(2) ಹಾಗೂ ಡಾನಿಲ್(6) ವಿಕೆಟ್ ಪಡೆದುಕೊಳ್ಳುವಲ್ಲಿ ಬೌಲರ್ಸ್ ಯಶಸ್ವಿಯಾದರು. ಯಾವುದೇ ಕಾರಣಕ್ಕೂ ಲಂಕಾ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಕೆ ಮಾಡಲು ಭಾರತದ ಬೌಲರ್ಸ್ಗಳು ಬಿಡಲಿಲ್ಲ. ಲಂಕಾ ತಂಡ 7 ವಿಕೆಟ್ನಷ್ಟಕ್ಕೆ 74ರನ್ಗಳಿಕೆ ಮಾಡಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನ 38 ಓವರ್ಗೆ ಕಡಿತಗೊಳಿಸಲಾಯಿತು. ಹೀಗಾಗಿ ಲಂಕಾ ತಂಡ 38 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 106ರನ್ಗಳಿಕೆ ಮಾಡಿತು.