ದುಬೈ:ವೇಗದ ಬೌಲರ್ ರಾಜ್ ಲಿಂಬಾನಿ ಅವರ ಅದ್ಭುತ ಬೌಲಿಂಗ್ನಿಂದ 19 ವರ್ಷದೊಳಗಿನವರ ತಂಡ ಏಷ್ಯಾ ಕಪ್ ಕ್ರಿಕೆಟ್ನಲ್ಲಿ ನೇಪಾಳ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಪಡೆದರು. ಎ ಗುಂಪಿನಿಂದ ಪಾಕಿಸ್ತಾನ ಮತ್ತು ಭಾರತ ಸೆಮಿ ಫೈನಲ್ ಪ್ರವೇಶಿಸಿದೆ. ನಾಳೆ (ಡಿ.13) ಬಿ ಗುಂಪಿನ ಬಾಂಗ್ಲಾದೇಶ - ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ - ಜಪಾನ್ ನಡುವೆ ಪಂದ್ಯ ನಡೆಲಿದ್ದು, ಗೆದ್ದ ತಂಡಗಳು ಸೆಮೀಸ್ನಲ್ಲಿ ಎ ಗುಂಪಿನ ತಂಡಗಳ ವಿರುದ್ಧ ಆಡಲಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ನೇಪಾಳವನ್ನು ಅತ್ಯಲ್ಪಮೊತ್ತಕ್ಕೆ ಕಟ್ಟಿಹಾಕಿತು. ನೇಪಾಳದ ಯಾವುದೇ ಒಬ್ಬ ಬ್ಯಾಟರ್ ಎರಡಂಕಿ ತಲುಪಲಿಲ್ಲ. ಮೂವರು ಆಟಗಾರರು 5ಕ್ಕಿಂತ ಹೆಚ್ಚಿನ ರನ್ ಗಳಿಸಿದರು. ಅದನ್ನು ಬಿಟ್ಟರೆ 7 ಆಟಗಾರರು 5ಕ್ಕಿಂತ ಕಡಿಮೆ ರನ್ ಗಳಿಸಿದರು. 22.1 ಓವರ್ಗೆ ನೇಪಾಳ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 52 ರನ್ಗೆ ಶರಣಾಯಿತು. ರಾಜ್ ಲಿಂಬಾನಿ ನೇಪಾಳದ ವಿರುದ್ಧ ಮಿಂಚಿನ ಬೌಲಿಂಗ್ ದಾಳಿ ಮಾಡಿದರು.
9.1 ಓವರ್ ಮಾಡಿದ ರಾಜ್ ಲಿಂಬಾನಿ ಕೇವಲ 13 ರನ್ ಕೊಟ್ಟು 7 ವಿಕೆಟ್ ಕಿತ್ತರು ಇವರಿಗೆ ತಂಡದಲ್ಲಿ ಸಾಥ್ ನೀಡಿದ್ದು ಆರಾಧ್ಯ ಶುಕ್ಲಾ. ಶುಕ್ಲಾ 9 ಓವರ್ ಮಾಡಿ 31 ರನ್ ಕೊಟ್ಟು 2 ವಿಕೆಟ್ ಪಡೆದರು. ಅರ್ಶಿನ್ ಕುಲಕರ್ಣಿ 1 ವಿಕೆಟ್ ಪಡೆದರು. ಏಷ್ಯಾಕಪ್ ಫೈನಲ್ನಲ್ಲಿ ಸಿರಾಜ್ ಶ್ರೀಲಂಕಾದ ವಿರುದ್ಧ ಬೌಲಿಂಗ್ ಪ್ರದರ್ಶನ ನೀಡಿದ ರೀತಿ ಕಂಡು ಬಂತು.