ಅಬುಧಾಬಿ:ವಿಲ್ ಜಾಕ್ಸ್((Will Jacks) ಅವರ ಬಿರುಸಿನ ಅರ್ಧಶತಕ ಹಾಗೂ ಬೆನ್ನಿ ಹಾವೆಲ್ (11 ಎಸೆತಗಳಲ್ಲಿ 35*) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಅಬುಧಾಬಿ ಟಿ-10(Abu Dhabi T10) ಟೂರ್ನಿಯಲ್ಲಿ ನಾರ್ದರ್ನ್ ವಾರಿಯರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಬಾಂಗ್ಲಾ ಟೈಗರ್ಸ್ ಮೊದಲ ಜಯ ದಾಖಲಿಸಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೈಗರ್ಸ್(Bangla Tigers) ಮೊದಲು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ನಾರ್ದರ್ನ್ ವಾರಿಯರ್ಸ್ಗೆ(Northern Warriors) ನಾಯಕ ರೊವ್ಮಾನ್ ಪೊವೆಲ್ ಭರ್ಜರಿ ಅರ್ಧಶತಕ(27 ಎಸೆತಗಳಲ್ಲಿ 63) ಸಿಡಿಸಿ ಬೃಹತ್ ಮೊತ್ತಕ್ಕೆ ನೆರವಾದರು.
ಅಲ್ಲದೇ, ಮೊಯಿನ್ ಅಲಿ 24 ಹಾಗೂ ಸಮಿತ್ ಪಟೇಲ್ 21 ರನ್ಗಳ ಕಾಣಿಕೆ ನೀಡಿದರು. 10 ಓವರ್ಗಲ್ಲಿ ವಾರಿಯರ್ಸ್ 4 ವಿಕೆಟ್ಗೆ 126 ರನ್ ಪೇರಿಸಿತು. ಟೈಗರ್ಸ್ ಪರ ಲುಕ್ ವುಡ್, ಫೌಲ್ಕ್ನರ್, ಉದಾನಾ ಹಾಗೂ ಕರೀಮ್ ಜನತ್ ತಲಾ ಒಂದು ವಿಕೆಟ್ ಪಡೆದರು.