ದುಬೈ(ಯುಎಇ):ಏಷ್ಯಾ ಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಭಾರತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದು, ಟಿ20ಯಲ್ಲಿ ಚೊಚ್ಚಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಅವರ ಈ ಗಮನಾರ್ಹ ಪ್ರದರ್ಶನಕ್ಕೆ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಪಂದ್ಯದ ಹಿಂದಿನ ದಿನ ನಾನು ಕೊಹ್ಲಿ ಅವರೊಂದಿಗೆ ಮಾತನಾಡಿದ್ದೆ. ಏನೋ ದೊಡ್ಡದಾಗಿ ನಡೆಯಲಿದೆ ಎಂಬಂತೆ ಭಾಸವಾಗಿತ್ತು. ಅದ್ಭುತವಾಗಿ ಆಡಿದ್ದೀರಿ, ಮೈ ಫ್ರೆಂಡ್" ಎಂದು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರೂ ಉತ್ತಮ ಸ್ನೇಹಿತರು. ಕೊಹ್ಲಿ ಬ್ಯಾಟಿಂಗ್ನಲ್ಲಿ ಕೆಟ್ಟ ದಿನಗಳನ್ನು ಅನುಭವಿಸುತ್ತಿದ್ದಾಗ ಅವರ ಪರವಾಗಿ ನಿಂತು ಪ್ರೋತ್ಸಾಹಕ ನುಡಿಗಳನ್ನಾಡಿದ್ದ 'ಮಿ.360', ಅನೇಕ ಸಲಹೆಗಳನ್ನೂ ನೀಡುತ್ತಿದ್ದರು. ಐಪಿಎಲ್ನಲ್ಲಿ ಇಬ್ಬರು ಅನೇಕ ಪಂದ್ಯಗಳಲ್ಲಿ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇಬ್ಬರ ನಡುವಿನ ಸ್ನೇಹ ಗಾಢವಾಗಿದ್ದು, ಮೇಲಿಂದ ಮೇಲೆ ಫೋನ್ನಲ್ಲಿ ಮಾತನಾಡುತ್ತಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಇಬ್ಬರು ಮಾತನಾಡಿದ್ದರು.